ದಿನಾಂಕ 15/11/2025 ರಂದು ಪಿರ್ಯಾದಿದಾರರಾದ ಶಿವರಾಜ್‌ರವರು ಕೆಲಸ ಮುಗಿಸಿ ವಾಪಾಸ್ಸು ಮನೆಗೆ ಬರುವಾಗ 22:50 ಗಂಟೆ ಸಮಯಕ್ಕೆ ಕೊಪ್ಪಲ ಎಂಬಲ್ಲಿ ಪಿರ್ಯಾದಿದಾರರ ಬೈಕನ್ನು ಮಂಜುನಂದ ಹೆಗ್ಡೆ ರವರು ಅಡ್ಡಗಟ್ಟಿ ತಲವಾರನ್ನು ಪಿರ್ಯಾದಿದಾರರ ತಲೆಗೆ ಮಾರಣಾಂತಿಕವಾಗಿ ಹೊಡೆದು ಕೊಲೆಗೆ ಪ್ರಯತ್ನಿಸಿದ್ದು , ಪಿರ್ಯಾದಿದಾರರು ಕೂಡಲೇ ಬೈಕ್ ನಿಂದ ಕೆಳಗೆ ಬಿದ್ದಿದ್ದು , ನಂತರ ಮಂಜುನಂದ ಹೆಗ್ಡೆ, ರವರು ಪಿರ್ಯಾದಿದಾರರ ಹೊಟ್ಟೆಯ ಎಡ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ , ಭುಜದ ಕೆಳಗೆ ತಲವಾರಿನಿಂದ ಹೊಡೆದಿರುವುದಾಗಿದೆ. ಸದ್ರಿ ಸಮಯ ಮಂಜುನಂದ ಹೆಗ್ಡೆ ರವರ ಜೊತೆಗೆ ಜಯಾನಂದ ಹೆಗ್ಡೆ , ಚಂದ್ರಹಾಸ ಹೆಗ್ಡೆ ಹಾಗೂ ಇತರ 7-8 ಜನ ಇತರರು ಜಾಗದಲ್ಲಿ ಇದ್ದು ಹಲ್ಲೆಗೆ ಪ್ರಯತ್ನಿಸಿರುತ್ತಾರೆ.ಎಂಬಿತ್ಯಾದಿಯಾಗಿ ನೀಡಿದ ಪಿರ್ಯಾದಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 83/2025 ಕಲಂ: 109 (1),126 (2),191(2),191(3),190 BNS ರಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

ಪುನೀತ್ ಕುಮಾರ್ ಬಿ.ಇ ಪಿ.ಎಸ್.ಐ (ಕಾ&ಸು) ಹಿರಿಯಡಕ ಪೊಲೀಸ್ ಠಾಣೆ ಹಾಗೂ ಅವರ ತಂಡ ಆರೋಪಿಗಳಾದ ಜಗದೀಶ್ ಹೆಗ್ಡೆ @ ಜಗದೀಶ್ಚಂದ್ರ ಹೆಗ್ಡೆ, ಪ್ರಾಯ: 48 ವರ್ಷ, ತಂದೆ: ದಿ.ಕೃಷ್ಣಯ್ಯ ಹೆಗ್ಡೆ, ವಿಳಾಸ: ಸುಪ್ರಬ,ಕೊಪ್ಪಲ, ಕಣಜಾರು ಗ್ರಾಮ, ಕಾರ್ಕಳ ತಾಲೂಕು,ಉಡುಪಿ ಜಿಲ್ಲೆರವರನ್ನು ದಿನಾಂಕ 17/11/2025 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಪ್ರಕರಣದ ಪ್ರಮುಖ ಆರೋಪಿ ಮಂಜುನಂದ ಹೆಗ್ಡೆ, ಪ್ರಾಯ: 49 ವ̧ರ್ಷ ತಂದೆ:ದಯಾನಂದ ಹೆಗ್ಡೆ ವಿಳಾಸ: ಪರಾರಿ ಮನೆ, ಕಣಜಾರು ಪೋಸ್ಟ್, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆಈತನು ಕೃತ್ಯ ಎಸಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ದಿನಾಂಕ 18/11/2025 ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಆತನನ್ನು ದಸ್ತಗಿರಿ ಮಾಡಿ ಆತನು ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡನ್ನು ಸ್ವಾಧೀನಪಡಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ



