ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನದ ಅಂಗಡಿಯ ಮಾಲಿಕನು ಆತನ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ದಿನಾಂಕ:-28.09.2023 ರಂದು ಆಂಧ್ರಪ್ರದೇಶದ ನಲ್ಲೂರಿನಲ್ಲಿರುವ ಮುಕೇಶ್ ಮತ್ತು ಶುಭಂ ಗೋಲ್ಡ್ ಜ್ಯೂವಲರಿ ಅಂಗಡಿಯ ಮಾಲಿಕರಿಗೆ ಒಟ್ಟು 1 ಕೆ.ಜಿ. 262 ಗ್ರಾಂ .ತೂಕದ ಚಿನ್ನದ ಆಭರಣಗಳನ್ನು ಕೊಟ್ಟು ಬರುವಂತೆ ಕಳುಹಿಸಿಕೊಟ್ಟಿರುತ್ತಾನೆ. ಆದರೆ, ಅಂಗಡಿಯ ಸೇಲ್ಸ್ ಮ್ಯಾನ್ ನೆಲ್ಲೂರಿಗೆ ಹೋಗಿ ಮೊಬೈಲ್ ಮುಖಾಂತರ ಮಾಲೀಕರಿಗೆ ತಿಳಿಸಿದ್ದೇನೆಂದರೆ, \”ನೆಲ್ಲೂರಿನಲ್ಲಿ ತನಗೆ ಯಾರೋ ಅಪರಿಚಿತರು ಗನ್‌ಪಾಯಿಂಟ್ ಮಾಡಿ, ಕೈಗಳಿಗೆ ಚಾಕುವಿನಿಂದ ಹಲ್ಲೆಮಾಡಿ, ಚಿನ್ನವಿರುವ ಬ್ಯಾಗ್‌ನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ. ನಂತರ ಅಂಗಡಿಯ ಮಾಲೀಕನು ಸೇಲ್ಸ್ ಮ್ಯಾನ್‌ನನ್ನು ನೆಲ್ಲೂರಿನಿಂದ ವಾಪಸ್ ಕರೆದುಕೊಂಡು ಬಂದು ದಿನಾಂಕ:22.10.202) ರಂದು ಹಲಸೂರುಗೇಟ್, ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾನೆ.
ತನಿಖೆ ಕೈಗೊಂಡ ತನಿಖಾಧಿಕಾರಿಗಳು ಅಂಗಡಿಯ ಸೇಲ್ಸ್ ಮ್ಯಾನ್‌ನನ್ನು ಸುದೀರ್ಘವಾಗಿ ವಿಚಾರಣೆ ಕೈಗೊಂಡು ಸೇಲ್ಸ್ ಮ್ಯಾನ್ ನಿಂದ ನಿಜವಾಗಿ ನಡೆದ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ. ನಂತರ, ಸೇಲ್ಸ್ ಮ್ಯಾನ್/ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್, ಅಭಿರಕ್ಷೆಗೆ ಪಡೆದು, ಅವನು ನೀಡಿದ ಮಾಹಿತಿ ಮೇರೆಗೆ ರಾಜಸ್ತಾನಕ್ಕೆ ಹೋಗಿ ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು, ಆತನಿಂದ 1 ಕೆ.ಜಿ. 262 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಇದರ ಮೌಲ್ಯ 175 ಲಕ್ಷಗಳಾಗಿರುತ್ತದೆ. ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಆರೋಪಿಗಳ ಬಗ್ಗೆ ತನಿಖೆ ಮುಂದುವರೆದಿದೆ.
ಈ ಪ್ರಕರಣದಲ್ಲಿ ಶ್ರೀ ಶೇಖರ್, ಹೆಚ್.ಟಿ, ಉಪ-ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಮತ್ತು
ಶ್ರೀ.ಶಿವಾನಂದ, ಚಲವಾದಿ, ಎ.ಸಿ.ಪಿ, ಹಲಸೂರುಗೇಟ್, ರವರ ಮಾರ್ಗದರ್ಶನದಲ್ಲಿ, ಹಲಸೂರುಗೇಟ್ ಠಾಣೆ
ಪೊಲೀಸ್ ಇನ್ಸ್‌ಪೆಕ್ಟರ್, ಶ್ರೀಹನುಮಂತ\’ ಭಜಂತ್ರಿ ರವರು ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳು ಮತ್ತು
ಕಳುವಾದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.