ದಿನಾಂಕ 07.02.2026 ರಂದು 20;45 ಗಂಟೆಗೆ ಆರೋಪಿತರು ಅಶೋಕ ಎಂಬುವರಿಗೆ ಸೇರಿದ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಬೈಲ್‌ಬೆಟ್ಟು ಎಂಬಲ್ಲಿ ಸಾದ್ವಿನ್ ಎಂಬ ಹೆಸರಿನ ಮನೆಯ ಮೊದಲನೆ ಮಹಡಿಯಲ್ಲಿ ಮಂಗಳೂರಿನ ಅಪ್ರಿತ್ ಹಾಗೂ ನಿಶಾಂತ ಎಂಬುವರೊಂದಿಗೆ ಸೇರಿ ಸಂಘಟಿತರಾಗಿ ಅಕ್ರಮವಾಗಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದರು. ಈ ಸಮಯ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐ ಮುರುಳೀಧರ ನಾಯ್ಕ ಹಾಗೂ ಸಿಬ್ಬಂದಿಯವರು ಖಚಿತ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ, ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ನಗದು ಹಣ ರೂಪಾಯಿ 22690/- ಹಾಗೂ 52 ಇಸ್ಪೀಟ್ ಎಲೆಗಳು, 16 ಹೊಸ ಇಸ್ಟೀಟ್ ಎಲೆಗಳು ಇರುವ ಪ್ಯಾಕೆಟ್, 10 ಪ್ಲಾಸ್ಟಿಕ್ ಕುರ್ಚಿ, 4 ಪ್ಲಾಸ್ಟಿಕ್ ಟೇಬಲ್ ಹಾಗೂ 9 ಮೊಬೈಲ್ ಪೋನ್‌ಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾದೀನಪಡಿಸಿಕೊಂಡು. ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 23/26 U/s. 79,80 KP Act. 112 BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣ ಆರೋಪಿಗಳಾದ 1) ಉಮ್ಮರ ಫಾರೂಕ್( 62), ತಂದೆ. ಇಸುಬು, ಕುವಿಟ್ಟು ಗ್ರಾಮ, ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು, 2) ಅಬ್ದುಲ್ ಅಜೀಜ್ (40), ತಂದೆ, ಸುಲೇಮಾನ್, ಸಜಿಪಪಡು ಮೂಡ ಬಂಟ್ವಾಳ ತಾಲೂಕು 3) ಸತೀಶ ಎಸ್ ಪ್ರಭು (49), ತಂದೆ. ಶೇಷಗಿರಿ ಪ್ರಭು, ಗುಡ್ಡೆಯಂಗಡಿ ಶಾಲೆಯ ಬಳಿ, ರೇಂಜಾಳ ಗ್ರಾಮ, ಕಾರ್ಕಳ ತಾಲೂಕು, 4) ಅಬ್ದುಲ್ ರಹಿಮಾನ್(49), ತಂದೆ.ಆಹ್ಮದ್ ಭಾವ, ಬೊಳಿಯಾರು, ಮಂಗಳೂರು, 5) ಸಮೀರ್(46), ತಂದೆ. ಇಸ್ಮಾಯಿಲ್, ಮೂಡಾ, ಬಂಟ್ವಾಳ ತಾಲೂಕು, 6) ಸುಲೇಮಾನ್(45), ತಂದೆ: ಹಮೀದ್, ಬೇಂಗ್ರೆ, ಕಸಬಾ ಗ್ರಾಮ, ಮಂಗಳೂರು, 7) ಇರ್ಪಾನ್(26) ತಂದೆ, ಅಬ್ಬುಬಕ್ಕರ್, ಕಂಚಿನಡ್ಕ ಪದವು ಸಜಿಪ ನಡು, ಬಂಟ್ವಾಳ ತಾಲೂಕು ಮತ್ತು 8) ಚೇತಕ್(38), ತಂದೆ. ಭಾಸ್ಕರ , ಸಜಿಪ ಮೂನ್ನೂರು, ಬಂಟ್ವಾಳ ತಾಲೂಕು ಇವರುಗಳನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಉಳಿದ ಮೂರು ಆರೋಪಿಗಳು ಓಡಿ ಹೋಗಿರುತ್ತಾರೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







