ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಮತ್ತು ಸೈಬರ್ ಕಾನೂನು ಹಾಗೂ ಫೋರೆನ್ಸಿಕ್ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು ರವರ ಸಹಯೋಗದೊಂದಿಗೆ ಸೈಬರ್ ಅಪರಾಧಗಳ ತನಿಖೆಯ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಡಾ. ನಾಗರತ್ನ ಅಣ್ಣಪ್ಪ, ಅಸೋಸಿಯೇಟ್ ಕಾನೂನು ಪ್ರಾಧ್ಯಾಪಕರು, ಮುಖ್ಯ ಸಂಯೋಜಕರು, ಸೈಬರ್ ಕಾನೂನು ಮತ್ತು ವಿಧಿವಿಜ್ಞಾನದಲ್ಲಿ ಸಂಶೋಧನಾ ಅಭಿವೃದ್ಧಿ ಮತ್ತು ತರಬೇತಿಯ ಸುಧಾರಿತ ಕೇಂದ್ರ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು
ರವರು ನಡೆಸಿಕೊಟ್ಟ ಈ ಕಾರ್ಯಾಗಾರದಲ್ಲಿ ಸೈಬರ್ ಕ್ರೈಮ್ ಎಂದರೇನು, ಯಾವ ಅಪರಾಧಗಳನ್ನು ಸೈಬರ್ ಕ್ರೈಮ್ ಎಂದು ಗುರುತಿಸಬಹುದು, ಸೈಬರ್ ಕ್ರೈಮ್ ನಲ್ಲಿ ಅಪರಾಧಗಳು ನಡೆದಾಗ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸೈಬರ್ ಅಪರಾಧಗಳಲ್ಲಿ ಯಾವ ರೀತಿ ಸಾಕ್ಷ್ಯಗಳನ್ನು ಸಂಗ್ರಹಣೆ ಮಾಡಬೇಕು, ನ್ಯಾಯಾಲಯಕ್ಕೆ ಹೇಗೆ ಸಾಕ್ಷಿಗಳನ್ನು ಒಪ್ಪಿಸಬೇಕು, ಎಫ್ ಎಸ್ ಎಲ್ ಪರೀಕ್ಷೆಗಾಗಿ ಯಾವ ವಸ್ತುಗಳನ್ನು ಕಳುಹಿಸಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,