ಕೊರೊನಾ ಕಟ್ಟಿಹಾಕಲು ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದೆ. ಆದರೆ ಪೊಲೀಸರಿಗೆ ಒಂದಲ್ಲ ಒಂದು ಸುಳ್ಳು ಹೇಳಿ ಜನ ತಪ್ಪಿಸಿಕೊಳ್ಳುತ್ತಾರೆ. ಇನ್ನೂ ಮುಂದೆ ತುಮಕೂರು ಜನರ ಸುಳ್ಳು ಹೇಳಲು ಆಗಲ್ಲಾ,.. ಬೀದಿ .. ಗಲ್ಲಿ ಗಳಲ್ಲಿ ಓಡಾಡೋ ಜನರು ಇನ್ನೂ ಮುಂದೆ ಹುಷಾರಾಗಿ ಇರಬೇಕು. ಯಾಕೆ ಅಂದರೆ ಪೊಲೀಸ್ ಕಾಲ್ನಡಿಗೆ ಗಸ್ತು ತಿರುಗಲಿದ್ದಾರೆ. ಈ ನೂತನ ಪ್ರಯೋಗ ವನ್ನು ಮೆಳೆಕೋಟೆ ರಸ್ತೆಯಿಂದ ಚಾಲನೆ ನೀಡಲಾಯಿತು. ಜಿಲ್ಲೆ ಎಲ್ಲಾ ಪೊಲೀಸ್ ಠಾಣೆಗಳಿಂದ ಐದು ಜನರ ತಂಡ ರಚಿಸಿ ಕೋವಿಡ್ 19 ರ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ, ಮುನ್ನೆಚ್ಚರಿಕೆ ಹಾಗೂ ಮಾಸ್ಕ್ ಧರಿಸಿಕೂಳ್ಳದಿರುವವರ ಮೇಲೆ ದಂಡ ಕೂಡ ಹಾಕಲಾಗುತ್ತದೆ.
ನಗರದ ಪ್ರಮುಖ ರಸ್ತೆ ಗಳಲ್ಲಿ ಚೆಕ್ ಪಾಯಿಂಟ್ ಹಾಕಲಾಗಿದ್ದು ಇಲ್ಲಿ ರಸ್ತೆಯಲ್ಲಿ ವಾಹನಗಳಲ್ಲಿ ಸುಮ್ಮನೆ ತಿರುಗುತ್ತಿರುವ ವಿಚಾರಣೆ ಮತ್ತು ದಂಡ ಹಾಕಲಾಗುತ್ತದೆ, ಆದರೆ ಗಲ್ಲಿ ರಸ್ತೆಯಲ್ಲಿ ಪೋಲೀಸರು ಕಾಲ್ನಡಿಗೆ ಮೂಲಕ ಹೋದರೆ ಸಾರ್ವಜನಿಕರಿಗೆ ಅರಿವು ಮೂಡಿಸಬಹುದು ಹಾಗೂ ಪೊಲೀಸ್ ಸಿಬ್ಬಂದಿಗಳು ಕೂಡ ನಡಿಗೆಯಲ್ಲಿ ತೂಡಗಿಸಿಕೂಂಡು ಅವರುಗಳ ಆರೋಗ್ಯ ಕೂಡ ವೃದ್ದಿಸುತ್ತದೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್