ಉಡುಪಿ: ಮುದರಂಗಡಿಯಿಂದ ಉಡುಪಿ ಕಡೆಗೆ ಗರ್ಭಿಣಿ ಮಹಿಳೆಯನ್ನು ಕೊಂಡೊಯ್ಯುತ್ತಿದ್ದ ಖಾಸಗಿ ಅಂಬುಲೆನ್ಸ್ ಮತ್ತು ಶಿಫ್ಟ್ ಡಿಸೈರ್ ಕಾರು ನಡುವೆ ನಡೆದ ಅಪಘಾತದಿಂದ ವಾಹನಗಳು ಜಖಂಗೊಂಡ ಘಟನೆ ನವೆಂಬರ್ 9, ಭಾನುವಾರ ಸಂಜೆ ಕಾಪು ರಸ್ತೆಯ ಶಿರ್ವ ಸಾವುದ್ ಸಭಾಭವನದ ಎದುರು ಸಂಭವಿಸಿದೆ.
ತೀವ್ರ ವೇಗದಲ್ಲಿ ಸಾಗುತ್ತಿದ್ದ ಅಂಬುಲೆನ್ಸ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಹಾನಿಗೊಳಗಾದರೂ ಕಾರು ಚಾಲಕ, ಅಂಬುಲೆನ್ಸ್ ಚಾಲಕ ಹಾಗೂ ಅಂಬುಲೆನ್ಸ್‌ನಲ್ಲಿದ್ದ ಗರ್ಭಿಣಿ ರೋಗಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಶಿರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳೀಯರು ಶಿರ್ವ–ಪಂಜಿಮಾರು ರಸ್ತೆ ತೀವ್ರ ಹದಗೆಟ್ಟಿರುವುದರಿಂದ ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್‌ಗಳು ಹಾಗೂ ಖಾಸಗಿ ವಾಹನಗಳು ಕಾಪು ರಸ್ತೆ ಬಳಸುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







