ಕೋರಮಂಗಲ ಪೊಲೀಸರು ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾದರು .ಎಲ್ಲಾ ದರೋಡೆಕೋರರು ನೇಪಾಳದಿಂದ ಮಂದಿ ಇಲ್ಲಿ ಹಲವೆಡೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.ಕೆಲವು ಆರೋಪಿಗಳು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಈ ದರೋಡೆ ಮಾಡಲಾಯಿತು .
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6ನೇ ಬ್ಲಾಕ್ ನಲ್ಲಿ ವಾಸವಾಗಿರುವ ಉದ್ಯಮಿ ಮದನ್ ಮೋಹನ್ ರೆಡ್ಡಿ ಅವರ ಮನೆಯಲ್ಲಿ ನೇಪಾಲಿ ವ್ಯಕ್ತಿ ಮತ್ತು ಅವನ ಪತ್ನಿ ಮನೆ ಕೆಲಸ ಪಡೆದಿದ್ದರು .ಉದ್ಯಮಿ ಮದನ್ ಮೋಹನ್ ರೆಡ್ಡಿ , ತಮಿಳುನಾಡಿಗೆ ತಮ್ಮ ತೋಟದ ಮನೆಗೆ ಹೋಗಿದ್ದರು.ಅವರ 20 ವಯಸ್ಸಿನ ಮಗಳು ಮನೆಯಲ್ಲೇ ಉಳಿದುಕೊಂಡರು .
ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿಗಳು ತಮ್ಮ ಸಹಚರರ ಜತೆ ಸೇರಿ ಅಂದು ಮಧ್ಯರಾತ್ರಿ ಉದ್ಯಮಿ ಮನೆಯ ಬಾಗಿಲು ಒಡೆದು ಕೊಠಡಿಯಲ್ಲಿ ಮಲಗಿದ್ದ ಉದ್ಯಮಿ ಮಗಳಿಗೆ ಗಾಜಿನ ಬಾಟಲಿ ತೋರಿಸಿ ಹೆದರಿಸಿ ಹಣ ಆಭರಣ ದುಬಾರಿ ಬೆಲೆಯ ವಾಚ್ ಗಳನ್ನು ಕದ್ದು ಪರಾರಿಯಾಗಿದ್ದರು .ವಿಷಯ ತಿಳಿದು ಕೂಡಲೇ ಮನೆಗೆ ವಾಪಸ್ ಬಂದ ಮೋಹನ್ ರೆಡ್ಡಿ ಕೋರಮಂಗಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದರು .
ಕೋರಮಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿ ಕೆ .ಬಿ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ 3ವಿಶೇಷ ಪೊಲೀಸ್ ತಂಡ ರಚನೆ ಮಾಡಿದರು .1ತಂಡ ನೇಪಾಳದ ಗಡಿಯಲ್ಲಿ ಮತ್ತೊಂದು ತಂಡ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ 7ಮಂದಿಯನ್ನು ಬಂಧಿಸಿದರು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,