ದಿನಾಂಕ 27/09/25 ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಖಾಸಗಿ ಬಸ್ ಮಾಲಕ ಸೈಯಿಪುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ 1) ಮಹಮದ್ ಫೈಸಲ್ ಖಾನ್(27), ತಂದೆ: ರಫೀಕ್ ಖಾನ್, ಮಿಷನ್ ಕಂಪೌಂಟ್ ಬಳಿ, 76 ಬಡಗಬೆಟ್ಟು ಗ್ರಾಮ ಉಡುಪಿ. 2) ಮೊಹಮದ್ ಶರೀಫ್ (37), ತಂದೆ: ದಿ. ಮೂಸಾ ಸಾಹೇಬ್ ವಾಸ: ಮನೆ ನಂಬ್ರ 1/109, ಜನತಾ ಕಾಲೋನಿ, ಕರಂಬಳ್ಳಿ, ಕುಂಜಿಬೆಟ್ಟು ಅಂಚೆ ಶಿವಳ್ಳಿ ಗ್ರಾಮ, ಉಡುಪಿ. 3)ಅಬ್ದುಲ್ ಶುಕುರ್(43, ತಂದೆ: ದಿ. ಎಸ್ ಮೊಹಮದ್ ವಾಸ: ಲಂಡನ್ ಪಾರ್ಕ ಹಿಂಭಾಗ, 7ನೇ ಬ್ಲಾಕ್, ಕೃಷ್ಣಾಪುರ ಅಂಚೆ ಕಾಟಿಪಳ್ಳ ಗ್ರಾಮ, ಮಂಗಳೂರು ತಾಲೂಕು, ದ.ಕ ಜಿಲ್ಲೆ ಇವರನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳನ್ನು ಉಡುಪಿ ಡಿ.ಟಿ. ಪ್ರಭು, ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ರಾಮಚಂದ್ರ ನಾಯಕ್, ಪೊಲೀಸ್ ವೃತ್ತ ನಿರೀಕ್ಷಕರು, ಮಲ್ಪೆ ವೃತ್ತ ರವರ ನೇತೃತ್ವದಲ್ಲಿ ಅನಿಲ್ ಕುಮಾರ್ ಡಿ, ಪಿ.ಎಸ್.ಐ, ಮಲ್ಪೆ ಠಾಣೆ ಹಾಗೂ ಸಿಬ್ಬಂದಿಯವರ ವಿಶೇಷ ತಂಡ ಕಾರ್ಯಾಚರಣೆ ನಡೆಸಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ