ಕೆಎಸ್ ಆರ್ ಪಿ ಸೇರಿದವರಲ್ಲಿ ಶೇ 25 ಸಿಬ್ಬಂದಿ ಪ್ರತಿ ವರ್ಷ ಸಿವಿಲ್ ವಿಭಾಗಕ್ಕೆ ಹೋಗುತ್ತಾರೆ .ಅಲ್ಲಿ ಅವಕಾಶ ಸಿಗದಿದ್ದರೆ ಮಾತ್ರ ಇಲ್ಲಿ ಉಳಿಯುತ್ತಾರೆ ಎಂದು ಕೆ.ಎಸ್.ಆರ್.ಪಿ ಎ.ಡಿ.ಜಿ .ಅಲೋಕ್ ಕುಮಾರ್ ಅವರು ಹೇಳಿದ್ದಾರೆ .
ಕೆಎಸ್ಸಾರ್ಪಿ ಕೂಡ ಅತ್ಯಂತ ಸಮರ್ಥ ಪೊಲೀಸ್ ವ್ಯವಸ್ಥೆ ಆಗಿದೆ.ಸಿವಿಲ್ ವಿಭಾಗದಲ್ಲಿ ಬಡ್ತಿಗೆ ಕನಿಷ್ಠ 10 ವರ್ಷ ಕಾಯಬೇಕು ,ಆದರೆ ಕೆ.ಎಸ್.ಆರ್. ಪಿ. ಯಲ್ಲಿ 5ವರ್ಷ ಸಾಕು ಎನ್ನುತ್ತಾರೆ ಅಲೋಕ್ ಕುಮಾರ್.
ಆರಂಭದಲ್ಲಿಯೇ ₹35,000/- ಸಂಬಳ ,ಸುಸಜ್ಜಿತ ಮನೆ ,ಆರೋಗ್ಯ ವಿಮೆ ,ಕ್ಯಾಂಟೀನ್ ,ಮಕ್ಕಳಿಗೆ ಪೊಲೀಸ್ ಪಬ್ಲಿಕ್ ಸ್ಕೂಲ್ ,ವಿವಿಧ ಭತ್ಯೆ ಸೇರಿ ಕಾನ್ ಸ್ಟೇಬಲ್ ಸಂಬಳವೇ ₹60,000/- ರಿಂದ ₹75,000/-ದಾಟುತ್ತದೆ ಎನ್ನುತ್ತಾರೆ ಕೆ.ಎಸ್.ಆರ್.ಪಿ ಎ.ಡಿ.ಜಿ .ಅಲೋಕ್ ಕುಮಾರ್ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,