ದಿನಾಂಕ 14.01.2026 ರಂದು ಕೆನರಾ ಬ್ಯಾಂಕ್ ನ ಎಚ್ ಕೆ ಗಂಗಾಧರ್, ಜನರಲ್ ಮ್ಯಾನೇಜರ್, ಮಣಿಪಾಲ ಸರ್ಕಲ್ ಹಾಗೂ ಮಹಾಮಾಯ ಪ್ರಸಾದ್ ರಾಯ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ರೀಜನಲ್ ಆಫೀಸ್, ಉಡುಪಿ-1 ರವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಬ್ಯಾರಿಕೇಡ್ ನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಕಾರ್ತಿಕೇಯನ್ ಪಿ., ಡಿವಿಜಿನಲ್ ಮ್ಯಾನೇಜರ್, ರೀಜನಲ್ ಆಫೀಸ್, ಉಡುಪಿ-1, ಶ್ರೀ ನಿರಂಜನ್ ಆಚಾರ್ಯ, ಮ್ಯಾನೇಜರ್, ರೀಜನಲ್ ಆಫೀಸ್, ಉಡುಪಿ-1, ಶ್ರೀ ಸುಧಾಕರ ಎಸ್ ನಾಯ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ಪ್ರಭು ಡಿ.ಟಿ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪವಿಭಾಗ, ಶ್ರೀ ಎಚ್ ಡಿ ಕುಲಕರ್ಣಿ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪವಿಭಾಗ, ಶ್ರೀ ಮಹೇಶ್ ಪ್ರಸಾದ್, ಪೊಲೀಸ್ ನಿರೀಕ್ಷಕರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







