Konkan Railway Corporation Limited (KRCL) ಸಂಸ್ಥೆಯವರು, ಸಂಸ್ಥೆಯ CSR ಅಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನವನ್ನು ನೀಡಿರುತ್ತಾರೆ.
ಈ ದಿನ ದಿನಾಂಕ 20.02.2026ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಈ ವಾಹನವನ್ನು ಶ್ರೀಮತಿ ಆಶಾ ಶೆಟ್ಟಿ, ರೀಜನಲ್ ರೈಲ್ವೆ ಮ್ಯಾನೇಜರ್, ಕಾರವಾರ ಇವರು ಗೌರವಾನ್ವಿತ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್, ಐಪಿಎಸ್ ರವರಿಗೆ ಹಸ್ತಾಂತರಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







