ಉಡುಪಿ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಕಾಕಿ ಕಾರ್ಟೂನ್ ಹಬ್ಬ ಎನ್ನುವ ವಿನೂತನ ಕಾರ್ಯಕ್ರಮವನ್ನು ಕುಂದಾಪುರದ ರೋಟರಿ ಕಲಾಂ ಮಂದಿರದಲ್ಲಿ ದಿನಾಂಕ 15/11/2025 ರಿಂದ 19/11/2025 ರವರೆಗೆ ಆಚರಿಸಲಾಗುತ್ತಿದೆ. ಈ ದಿನ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ ದಯಾನಂದ್ ಐಪಿಎಸ್, ಡೈರೆಕ್ಟರ್ ಜನರಲ್, ಕಾರ್ಯಗೃಹ ಮತ್ತು ಸುಧಾರಣೆ, ಬೆಂಗಳೂರು ಇವರು ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಶ್ರೀ ಹರಿರಾಮ್ ಶಂಕರ್ ಐಪಿಎಸ್ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ಜಿಎ ಭಾವ, ನಿವೃತ್ತ ಡೆಪ್ಯುಟಿ ಪೊಲೀಸ್ ಕಮಿಷನರ್, ಶ್ರೀ ವಿನಯ್ ಗಾಂವ್ಕರ್, ನಿವೃತ್ತ ಡೆಪ್ಯುಟಿ ಪೊಲೀಸ್ ಕಮಿಷನರ್, ಶ್ರೀ ಎಸ್ ಎನ್ ಹೆಬ್ಬಾರ್, ಹಿರಿಯ ನ್ಯಾಯವಾದಿಗಳು ಮತ್ತು ಪತ್ರಕರ್ತರು ಕುಂದಾಪುರ ಹಾಗೂ ಶ್ರೀ ಕೆ ಸಿ ರಾಜೇಶ್ ಪತ್ರಕರ್ತರು ಕುಂದಾಪುರ ಇವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪೊಲೀಸ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಶ್ರೀ ಪ್ರಸನ್ನ, ಪೋಲಿಸ್ ಉಪನಿರೀಕ್ಷಕರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀ ಪ್ರಕಾಶ್, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಜಿತಅಸ, ಉಡುಪಿ, ಶ್ರೀ ಜೋಸ ಎಂಸಿ, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಡಿ ಎ ಆರ್ ಉಡುಪಿ, ಶ್ರೀ ವಿಜಯ ಮೊಗವೀರ, ಪೊಲೀಸ್ ಹೆಡ್ ಕಾನ್ಸ್ಟೇಬಲ್, ಜಿಲ್ಲಾ ಗಣಕಯಂತ್ರ ವಿಭಾಗ ಉಡುಪಿ ಮತ್ತು ಶ್ರೀ ಶಿವಾನಂದ ಬಿ, ಪೊಲೀಸ್ ಹೆಡ್ ಕಾನ್ಸ್ಟೇಬಲ್, ಅಪರಾಧ ಶಾಖೆ , ಜಿಲ್ಲಾ ಪೊಲೀಸ್ ಕಚೇರಿ, ಉಡುಪಿ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ ದಯಾನಂದ ಅವರು ಮಾತನಾಡಿ, ಕಾರ್ಯಕ್ರಮದ ಆಯೋಜಕರಾದ ಶ್ರೀ ಸತೀಶ್ ಆಚಾರ್ಯ ಅವರ ಒಡನಾಟದ ಬಗ್ಗೆ ತಿಳಿಸಿ, ತಾವು ಬೆಂಗಳೂರು ಕಮಿಷನರ್ ಆಗಿರುವಾಗ ಅವರು ಪೊಲೀಸ್ ಸಹಯೋಗದಲ್ಲಿ ನಿರ್ಮಿಸಿದ ಕಾರ್ಟೂನ್ ಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಟೂನ್ ಒಂದು ವಿಶಿಷ್ಟ ಕಲೆಯಾಗಿದ್ದು, ಕೇವಲ ಚಿತ್ರದಿಂದಲೇ ಭಾವನಾತ್ಮಕವಾಗಿ ವಿಷಯಗಳನ್ನು ತಿಳಿಸುವ ಒಂದು ಕಲೆಯಾಗಿರುವುದಾಗಿ ತಿಳಿಸಿದರು. ಈ ಕಲೆಯನ್ನು ಮುಂದಿನ ಪೀಳಿಗೆಗೂ ಪಸರಿಸಬೇಕು ಎಂಬ ನಿಲುವಿನೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಲ್ಲದೆ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬದವರಲ್ಲಿ ಇಂತಹ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು. ಶ್ರೀ ಎ ಎಸ್ ಎನ್ ಹೆಬ್ಬಾರ್ ಮಾತನಾಡಿ ತಾವು ಪತ್ರಕರ್ತರಾಗಿರುವ ಸಮಯದಲ್ಲಿನ ಪೊಲೀಸರ ರೊಂದಿಗಿನ ಅನುಭವಗಳನ್ನು ಹಂಚಿಕೊಂಡರು. ಶ್ರೀ ಜಿಎ ಭಾವ ಅವರು ಮಾತನಾಡಿ ಪೊಲೀಸರು ಇನ್ನು ಹೆಚ್ಚು ಸಾರ್ವಜನಿಕರಿಗೆ ಸಹಾಯಕವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸುವಂತೆ ತಿಳಿಸಿದರು. ಶ್ರೀ ವಿನಯ್ ಗಾಂವ್ಕರ್ ಇವರು ಮಾತನಾಡಿ ತಮ್ಮ ಕುಂದಾಪುರ ಸೇವಾವಧಿಯ ಬಗ್ಗೆ ಅನುಭವ ಹಂಚಿಕೊಂಡರು. ಶ್ರೀ ಹರಿರಾಮ್ ಶಂಕರ್ ಐಪಿಎಸ್ ಪೋಲಿಸ್ ಅಧಿಕ್ಷಕರು ಉಡುಪಿ ಇವರು ಮಾತನಾಡಿ ಪೊಲೀಸ್ ಹಾಗೂ ಕಾರ್ಟೂನ್ ಈ ಎರಡು ವಿರುದ್ಧ ದಿಕ್ಕಿನ ಪದಗಳಾಗಿದ್ದು, ಅವುಗಳ ಜೋಡಣೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದು ರಾಜ್ಯದಲ್ಲಿಯೇ ಪ್ರಥಮ ವಾಗಿರಬಹುದು ಎಂದು ತಿಳಿಸಿದರು. ಶ್ರೀ ಕೆ ಸಿ ರಾಜೇಶ್ ಇವರು ಮಾತನಾಡಿ ಶ್ರೀ ಬಿ ದಯಾನಂದ್ ರವರು ಮಂಗಳೂರು ಪೊಲೀಸ್ ಅಧೀಕ್ಷಕರಾಗಿರುವಾಗ ಮಾನವಿಯ ನೆಲೆಯಲ್ಲಿ ಮಾಡಿದ ಸಹಾಯದ ಬಗ್ಗೆ ಅನುಭವ ಹಂಚಿಕೊಂಡರು.
ಈ ದಿನ ಮಧ್ಯಾಹ್ನ 2:30 ರಿಂದ ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ ಎನ್ನುವ ಪೋಷಕರಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







