ದಿನಾಂಕ 29/12/2025 ರಂದು ಬೆಳಿಗ್ಗಿನ ಜಾವ 4.00 ಗಂಟೆಗೆ ಸುಮಾರಿಗೆ ಕುಂದಾಪುರ ಠಾಣಾ ವ್ಯಾಪ್ತಿಯ ಪುರಸಭಾ ವ್ಯಾಪ್ತಿಯ ಕುಂದಾಪುರ ತಾಲುಕು ಕಸಬ ಗ್ರಾಮದ ಕುಂದಾಪುರದ ವೆಂಕಟರಮಣ ದೇವಸ್ಥಾನದ ಎದುರು ಹಾಗೂ ಕುಂದಾಪುರ ಮುಖ್ಯ ರಸ್ತೆಯ ಪೂರ್ವ ಭಾಗದಲ್ಲಿರುವ ಪೇಟೆ ಶ್ರೀ ಆಂಜನೇಯ ದೇವಸ್ಥಾನದ ಎದುರಿನ ಆವಾರಣದಲ್ಲಿ ವೆಂಕಟರಮಣ ದೇವಸ್ಥಾನದ ಎದುರು ಇರುವ ಬಾಲಾಜಿ ಪ್ರಾವಿಜನ್ ಸ್ಟೋರ್ ನ ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಆ ಬೆಂಕಿಯು ಇತರ ಅಂಗಡಿಗಳಾದ ದಾಮೋದರ್ ಪ್ರಾವಿಜನ್ ಸ್ಟೋರ್, ಜನಾರ್ಧನ ಭಟ್ ಆಂಡ್ ಸನ್ಸ, ಮಧುರಾ ಎಲೆಕ್ಕ್ರಾನಿಕ್ಸ ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡು ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ಆರಿಸಿದ್ದು, ಸದ್ರಿ 4 ಅಂಗಡಿಗಳು ಸುಟ್ಟು ಹೋದ ಬಗ್ಗೆ ಬಾಲಾಜಿ ಪ್ರಾವಿಜನ್ ಸ್ಟೋರ್ ನ ಮಾಲರಾದ ಗಣೇಶ ನಾಯಕ್ ಠಾಣೆಗೆ ದೂರು ನೀಡಿದ್ದು, ಅದನ್ನು ಸ್ವೀಕರಿಸಿ ಠಾಣಾ FA02/ಕುಠಾ/2025ರಂತೆ ನೊಂದಾಯಿಸಿಕೊಂಡು ಸ್ಥಳ ಮಹಜರು ಜರುಗಿಸಲಾಗಿದೆ. ಸುಟ್ಟು ಹೋದ ಅಂಗಡಿಯ ಮಾಲೀಕರಿಗೆ ಇದರಿಂದಾಗಿ ಸುಮಾರು ಅಂದಾಜು 2 ಕೋಟಿ 96 ಲಕ್ಷ ರೂಪಾಯಿ ನಷ್ಟವುಂಟಾಗಿರುವುದಾಗಿದೆ.
ಸುಟ್ಟು ಹೋದ ಅಂಗಡಿ ಮಳಿಗೆಯ ಜನಾರ್ಧನ ಭಟ್ ಆಂಡ್ ಸನ್ಸ್ ಅಂಗಡಿಯಲ್ಲಿ ಪುಸ್ತಕದ ಮಳಿಗೆಯಿದ್ದು, ಅದರ ಪಕ್ಕದಲ್ಲಿ ಪಟಾಕಿ ದಾಸ್ತಾನು ಇರುವುದು ಕಂಡು ಬಂದಿದ್ದು, ಅದರ ಲೈಸೆನ್ಸ ಪರಿಶೀಲಿಸಲಾಗಿ. ಗಣೇಶ್ ಭಟ್ ಎನ್ನುವವರು 2024 ರಿಂದ 2029ರ ವರೆಗೆ ನವೀಕರಿಸಿದ್ದು, ಆದರೆ ದಿನಾಂಕ 16/12/2025 ರಂದು ಮಾನ್ಯ ಜಿಲ್ಲಾಧಿಕಾರಿಯವರು ಸದ್ರಿ ಲೈಸೆನ್‌ನ್ನು ರದ್ದು ಪಡಿಸಿರುವುದು ಕಂಡು ಬಂದಿರುತ್ತದೆ.
ಇವರು ಅನದಿಕೃತವಾಗಿ ಪಟಾಕಿಯನ್ನು ದಾಸ್ತಾನು ಇಟ್ಟುಕೊಂಡಿರುವುದರಿಂದ ಇವರ ವಿರುಧ್ದ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 150/2025 ಕಲಂ: 288 BNS 9(B)(1)(b) Explosive Actರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
ಸದರಿ ಪಟಾಕಿಗಳ ಒಟ್ಟು ಮೌಲ್ಯ 3,08,252.50/- ಆಗಬಹುದು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







