ಕಾರ್ಕಳ: ದಿನಾಂಕ 17/09/2025 ರಂದು 17:10 ಗಂಟೆಗೆ ಪಿರ್ಯಾದಿದಾರರಾದ ಉದಯ ಕುಮಾರ್ (48),ಕಸಬಾ ಗ್ರಾಮ ಕಾರ್ಕಳ ಇವರು KA-20-ED-7620 ನೇ ಸ್ಕೂಟಿ ಯಲ್ಲಿ ಪ್ರಿಂಸ್ಟನ್ ಎಂಬುವವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಹಿರ್ಗಾನ ದಿಂದ ಕಾರ್ಕಳ ಕಡೆಗೆ ಬರಲು ಕಾರ್ಕಳ ತಾಲೂಕಿನ ಹಿರ್ಗಾನ ಗೊರಟ್ಟಿ ಚರ್ಚ್ ಬಳಿ ಬರುತ್ತಿರುವಾಗ ಪಿರ್ಯಾದಿದಾರರ ಮುಂದೆ ಹೋಗುತ್ತಿದ್ದ KA-20-MD-6446 ನೇ ನಂಬ್ರದ ಕಾರನ್ನು ಆರೋಪಿ ವಿಘ್ನೇಶ್ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಯಾವುದೇ ಮುನ್ಸೂಚನೆ ನೀಡದೆ ಒಮ್ಮಲೆ ಕಾರಿನ ಬಲ ಬದಿಯ ಬಾಗಿಲನ್ನು ತೆಗೆದಿದ್ದು ಕಾರಿನ ಬಾಗಿಲು ಪಿರ್ಯಾದಿದಾರರು ಚಲಾಯಿಸಿ ಕೊಂಡು ಹೋಗುತ್ತಿದ್ದ ಸ್ಕೂಟಿಗೆ ತಾಗಿದ್ದು ಇದರ ಪರಿಣಾಮ ಪಿರ್ಯಾದಿದಾರರು ಮತ್ತು ಹಿಂಬದಿ ಯಲ್ಲಿ ಕುಳಿತಿದ್ದ ಪ್ರಿಂಸ್ಟನ್ ಸ್ಕೂಟಿ ಸಮೇತ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಕಾರ್ಕಳ ರೋಟರಿ ಆಸ್ಫತ್ರೆಗೆ ಕರೆದು ಕೊಂಡು ಬಂದಿದ್ದು ಅಲ್ಲಿ ಅವರನ್ನು ಪರೀಕ್ಷಿಸಿ ದ ವೈದ್ಯರು ಪ್ರಿಂಸ್ಟನ್ ನನ್ನು ಹೊರ ರೋಗಿಯಾಗಿ ದಾಖಲು ಮಾಡಿಕೊಂಡಿದ್ದು ಪಿರ್ಯಾದಿದಾರರ ಎಡಕೈ ಮಣಿ ಗಂಟಿನ ಬಳಿ ಹಾಗೂ ಬಲಕಾಲಿನ ಪಾದದ ಬಳಿ ಮೂಳೆ ಮುರಿತದ ಗಾಯವಾಗಿದೆ ಎಂದು ಹೇಳಿ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 116/2025 ಕಲಂ: 281, 125(A), 125(b) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







