ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್ ಎಂಬಲ್ಲಿ ಪೊಲೀಸ್ ಇಲಾಖೆಯ ಉಪಯೋಗಕ್ಕಾಗಿ ಶ್ರೀ ವಿನಿಶ್ (ರಶ್ವಿ ಕನ್ಸ್ಟ್ರಷನ್ ಮಾಲಕರು, ಕಾರ್ಕಳ ) ಇವರು ತನ್ನ ಮಾವ ದಿ. ಶ್ರೀ ಡಿ.ಆರ್. ರಾಜು ಇವರ ಸ್ಮರಣಾರ್ಥವಾಗಿ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸುಸಜಿತವಾದ ತನಿಖಾ ಠಾಣೆ ( ಚೆಕ್ ಪೋಸ್ಟ್ )ನ್ನು ನಿರ್ಮಿಸಿ ಕೊಟ್ಟಿದ್ದು, ಸದ್ರಿ ತನಿಖಾ ಠಾಣೆ (ಚೆಕ್ ಪೋಸ್ಟ್ಗೆ) ಕಾಂತಾವರ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ರಾಜೇಶ್ ಕೋಟ್ಯಾನ್, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ನವೀನ್ ಚಂದ್ರ ಶೆಟ್ಟಿ ಹಾಗೂ ಇತರ ಸಾರ್ವಜನಿಕರು ಸಹಕರಿಸಿದ್ದು, ಈ ಸುಸಜಿತವಾದ ತನಿಖಾ ಠಾಣೆಯನ್ನು ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಉಡುಪಿ ಇವರ ನಿದೇರ್ಶನದಂತೆ ಕಾರ್ಕಳ ಉಪ-ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ಐ.ಪಿ.ಎಸ್ ರವರು ದಿನಾಂಕ: 12.12.2025 ರಂದು ಉದ್ದಾಟಿಸುವುದರ ಮೂಲಕ ಪೊಲೀಸ್ ಇಲಾಖೆಯ ದೈನಂದಿನ ಕರ್ತವ್ಯಕ್ಕೆ ಹಸ್ತಾಂತರಿಸಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






