ಕಾರ್ಕಳ : ನಗರದ ಕುಂಟಲ್ಪಾಡಿ ಎಂಬಲ್ಲಿ ಮಂಗಳವಾರ. ಮುಂಜಾನೆ ವ್ಯಕ್ತಿಯೋರ್ವರ ಇರಿದು ಕೊಲೆಗೈದ ಘಟನೆ ನಡಿದಿದೆ. ಬಾಲಾಜಿ ಆರ್ಕೇಡ್ ನಿವಾಸಿ ನವೀನ್ ಪೂಜಾರಿ (50) ಎಂಬಾತನನ್ನು ಕುಂಟಲ್ಪಾಡಿ ರಸ್ತೆಯಲ್ಲಿ ಕೊಲೆಗೈಯಲಾಗಿದೆ. ಘಟನಾ ಸ್ಥಳದಲ್ಲಿ ದ್ವಿಚಕ್ರ ವಾಹನವಿದೆ. ಮೂಲತಃ ಮಂಗಳೂರಿನ ಪಡೀಲ್ ನಿವಾಸಿಯಾಗಿರುವ ನವೀನ್ (ಬಡ್ಡಿ ನವೀನ್) ಕಾರ್ಕಳ ಬಾಲಾಜಿ ಆರ್ಕೇಡ್‌ನಲ್ಲಿ ವಾಸವಾಗಿದ್ದರು.
ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಂವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್‌ಐ ಮುರಳೀಧರ್ ನಾಯ್ಕ ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್. ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ