ಶಿರ್ವ : KA 04 NC 0928 ಸೈಫ್ ಅಲಿ ಇವರ ಮಾಲಕತ್ವದ ಕ್ರೆಟ್ಟ ಬಿಳಿ ಕಾರು ಕಾಪು ವಿನ ಕಡೆಗೆ ವೇಗವಾಗಿ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಕಾಪು ರಸ್ತೆಯಲ್ಲಿರುವ ಸ್ಮಶಾನದ ಬಳಿ ಶಿರ್ವದಿಂದ ಮೂಳೂರು ಕಡೆ ಚಲಾಯಿಸುತ್ತಿದ್ದ ಹೀರೋ ಜೂಮ್ ಬೈಕಿಗೆ ರಭಸವಾಗಿ ಹಿಂದಿನಿಂದ ಗುದ್ದಿದೆ ಅಪಘಾತದ ರಭಸಕ್ಕೆ ಬೈಕಿನ ಸವಾರ ಪ್ರಕಾಶ್ ಕುಲಾಲ್ ಪ್ರಾಯ 50 ವರ್ಷ ಅವರ ಮಗ ದೀಕ್ಷಿತ್ ಪ್ರಾಯ 5 ವರ್ಷ ಇವರು ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟಿದ್ದು ಇವರಿಗೆ ಶಿರ್ವ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ ಮುಂದಿನ ಚಿಕಿತ್ಸೆಗೆ ಉಡುಪಿಗೆ ಕೊಂಡೊಯ್ಯಲಾಗಿದೆ ಸ್ಕೂಟರ್ ಸವಾರ ಹಾಗೂ ಅವರ ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಯಾಪದಿಂದ ಪಾರಾಗಿದ್ದಾರೆ
ತೀವ್ರವಾದ ಅಪಘಾತವನ್ನು ಮಾಡಿ ಕಾರನ್ನು ತೆಗೆದುಕೊಂಡು ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ. ತಕ್ಷಣ ಸಮಾಜ ಸೇವಕರಾದ ಶ್ರೀನಿವಾಸ್ ಶೆಣೈ ಹಾಗೂ ಸಾರ್ವಜನಿಕರು ಶಿರ್ವ ಠಾಣೆಗೆ ಕರೆ ಮಾಡಿ ರೋಗಿಗಳನ್ನು ಪ್ರಥಮ ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆಯನ್ನು ಕೊಡುವಂತೆ ಸಹಕರಿಸಿದ್ದಾರೆ ತಕ್ಷಣ ಸಾರ್ವಜನಿಕರ ಕರೆಗೆ ಸ್ಪಂದಿಸಿದ ಶಿರ್ವ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರು ಕಾರ್ಯಪ್ರವೃತ್ತರಾಗಿ ಕಾಪುವಿನ ದೇವಸ್ಥಾನದ ಬಳಿ ಕಾರು ಹಾಗೂ ಚಾಲಕನನ್ನು ಬಂಧಿಸಿ ಶಿರ್ವ ಠಾಣೆಗೆ ಕರೆತಂದಿರುತ್ತಾರೆ
ಕಾರು ಚಾಲಕ ಮೊಹಮ್ಮದ್ ಬಿಲಾಲ್ ಪ್ರಾಯ 25 ವರ್ಷ ಶಿರ್ವ ಮಸೀದಿ ಬಳಿ ಇವನ ವಾಸ ಇವನು ಕ್ರಿಕೆಟ್ ಮ್ಯಾಚ್ ನಲ್ಲಿ ಕಮೆಂಟರಿ ಹೇಳುವ ಕೆಲಸವನ್ನು ಮಾಡುತ್ತಿರುತ್ತಿದ್ದಾನೆ ಎಂದು ತಿಳಿದು ಬಂದಿದೆ ಇವನ ಅಜಾಗಾರುಕತೆ ಕಾರು ಚಾಲನೆಯನ್ನು ಪರಿಗಣಿಸಿದ ಸಾರ್ವಜನಿಕರು ಚಾಲಕ ಬಿಲಾಲ್ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುತ್ತಾರೆ
ಕಾರ್ಯಾಚರಣೆಯಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ ಸಿಬ್ಬಂದಿಗಳಾದ ಹೆಡ್ ಕಾನ್ಸ್ಟೇಬಲ್ ಭಾಸ್ಕರ್ ಶೆಟ್ಟಿಗಾರ್ ಪ್ರಕಾಶ್ ಮತ್ತಿತರರು ಸಹಕರಿಸಿದ್ದಾರೆ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ತನಿಖೆಯನ್ನು ಮುಂದುವರಿಸಲಾಗಿದೆ
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ




