ಡಾ. ಹರ್ಷ ಪ್ರಿಯಂವದಾ ಐಪಿಎಸ್, ಸಹಾಯಕ ಪೊಲೀಸ್ ಅಧೀಕ್ಷಕರು, ಕಾರ್ಕಳ ಉಪ ವಿಭಾಗ, ಕಾರ್ಕಳ ಹಾಗೂ ಅಜ್ಮತ್ ಆಲಿ, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತರವರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ಠಾಣಾ ಪಿ.ಎಸ್.ಐ. ಶುಭಕರ, ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಕಾಪು ಠಾಣೆ ಮತ್ತು ಸಿಬ್ಬಂದಿಯವರು ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 151/2025 ಕಲಂ 74, 75(i), 75(ii), 79 BNS ಪ್ರಕರಣದಲ್ಲಿನ ಸಂತ್ರಸ್ಥ ಮಹಿಳೆಯು ದಾಂಪತ್ಯ ಸಮಸ್ಯೆಯ ಕಾರಣದಿಂದ ಕೌನ್ಸಿಲಿಂಗ್ ಬಗ್ಗೆ ಕಾಪು ತಾಲೂಕು ಮೂಳೂರು ಗ್ರಾಮದ ಕಂಕಣಗುತ್ತು ಕಂಪೌಂಡ್ನಲ್ಲಿರುವ “ಸುನಂದಾ ವೆಲ್‌ನೆಸ್ ಸೆಂಟರ್” ಗೆ ಹೋಗಿದ್ದಾಗ ಆರೋಪಿ ನಿರಂಜನ ಶೇಖರ ಶೆಟ್ಟಿ(52), ತಂದೆ: ದಿ.ಶೇಖರ ಶೆಟ್ಟಿ, ಮಲ್ಲಾರ್ ಗ್ರಾಮ, ಕಾಪು ತಾಲೂಕು, ಉಡುಪಿ ಎಂಬಾತನು ಸಂತ್ರಸ್ಥೆಯನ್ನು ಕೌನ್ಸಿಲಿಂಗ್ ಮಾಡುವಾಗ ದೈಹಿಕ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಸಂತ್ರಸ್ಥೆಯು ಕಾಪು ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ನೀಡಿದ ಮೇರೆಗೆ ಆರೋಪಿ ನಿರಂಜನ ಶೇಖರ ಶೆಟ್ಟಿ ಎಂಬಾತನನ್ನು ಈ ದಿನ ದಿನಾಂಕ: 15/11/2025 ರಂದು ಸಂಜೆ ದಸ್ತಗಿರಿ ಮಾಡಿದ್ದು, ಆತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರೀ ಶುಭಕರ ಪೊಲೀಸ್ ಉಪ ನಿರೀಕ್ಷಕರು (ತನಿಖೆ) ಕಾಪು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ 28 ನೇ ನಾರಾಯಣ, ಪಿ.ಸಿ 2494 ನೇ ರಘು, ತನಿಖಾ ಸಹಾಯಕರಾಗಿ ಹೆಚ್.ಸಿ 1166 ನೇ ವಿಕ್ರಮ್, ಮತ್ತು ಪಿ.ಸಿ 2687 ನೇ ಸ್ವಾಮಿ ಡಿ.ಎಸ್ ರವರು ಭಾಗಿಯಾಗಿರುತ್ತಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







