ಯಡ್ರಾಮಿ : ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂದಿಸಿರುವ ಯಡ್ರಾಮಿ ಪೊಲೀಸರು 3.30 ಲಕ್ಷದ ರೂಪಾಯಿ ಮೌಲ್ಯದ 55 ಗ್ರಾಂ ಬಂಗಾರದ ಆಭರಣ ಮತ್ತು 1500 ರೊ ನಗದು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಲಬುರ್ಗಿ ನಗರದ ಶಾ ಜಿಲಾನಿ ದರ್ಗಾ ಏರಿಯಾ ನಿವಾಸಿ ಮೊಹಮ್ಮದ್ ರಫೀಕ್ ಅಲಿಯಾಸ್ ರಫೀಕ್ ತಂದೆ ಅಬ್ದುಲ್ ಗನಿ ಇನಾಮ್ದಾರ್ ಬಂಧಿಸಿದ್ದಾರೆ.
ಪಿಎಸ್ಐ ವಿಶ್ವನಾಥ್ ರೆಡ್ಡಿ ಮತ್ತು ಸಿಬ್ಬಂದಿ ತನಿಕಾ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಮನೆ ಕಳ್ಳತನ ಪ್ರಕರಣಗಳು ನಡೆಯುತಲ್ಲಿದ್ದವು. ಕಳ್ಳಕಾಕರ ಕಾಟದಿಂದ ಜನ ಮನೆ ಬಿಟ್ಟು ಹೊರ ಹೋಗಲು ಎದುರು ಅಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ಒಪ್ಪಿಸಿರುವುದರಿಂದ ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಎಸ್ ಐ ಹೆಡ್ ಕಾನ್ಸ್ಟೇಬಲ್ ಉಪಸತ್ತಿದ್ದರು.
ವರದಿ :- ಸಿದ್ದು ಪಟ್ಟೇದಾರ್