ಪಿರ್ಯಾದಿ ಬಸವ ಪೂಜಾರಿ(72), ತಂದೆ: ಸೋಮ ಪೂಜಾರಿ, ಯಡಾಡಿ ಮತ್ಯಾಡಿ ಗ್ರಾಮ, ಗುಡ್ಡಿಯಂಗಡಿ ಪೋಸ್ಟ್, ಕುಂದಾಫುರ ಇವರು ಮನೆಯ ಗೋದ್ರೇಜ್ ನಲ್ಲಿಟ್ಟಿದ್ದ ಚಿನ್ನದ ಸರವನನು ದಿನಾಂಕ:26.09.2025 ರ ಸಂಜೆ 7.00 ಗಂಟೆಯಿಂದ ದಿನಾಂಕ:27.09.2025 ರ ಬೆಳಿಗ್ಗೆ 09.00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಚಿನ್ನದ ಸರ 18 ಗ್ರಾಂ ತೂಕದ್ದಾಗಿದ್ದು ಅಂದಾಜು ಮೌಲ್ಯ 1,45,000/- ರೂ ಆಗಿರುತ್ತದೆ. ಈ ಬಗ್ಗೆ ನೀಡಿದ ದೂರಿನಂತೆ ಕೋಟ ಪೋಲಿಸ್ ಠಾಣೆ ಅಪರಾಧ ಕ್ರಮಾಂಕ : 176/2025 ಕಲಂ 331(4), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಈ ಪ್ರಕರಣದ ತನಿಖೆಯನ್ನು ಕೈಗೊಂಡ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪ-ನಿರೀಕ್ಷಕರಾದ ಪ್ರವೀಣ ಕುಮಾರ್ ಆರ್ ಪಿ.ಎಸ್.ಐ., ಸುಧಾಪ್ರಭು, ಪಿ.ಎಸ್.ಐ. ಹಾಗೂ ಠಾಣಾ ಸಿಬ್ಬಂದಿಗಳು ಆರೋಪಿ
ಆನಂದ(26), ತಂದೆ: ಸುಬ್ರಹ್ಮಣ್ಯ ಭೋವಿ, ವಾಸ: ನಂಬ್ರ 4-110, ಕಮಲಮ್ಮ, ಗುಡ್ಡಟ್ಟು ಗಣಪತಿ ದೇವಸ್ಥಾನ ರಸ್ತೆ, ಶಿರಿಯಾರ ಅಂಗನವಾಡಿ ಬಳಿ, ಶಿರಿಯಾರ ಗ್ರಾಮ, ಬ್ರಹ್ಮಾವರ ದಸ್ತಗಿರಿ ಮಾಡಿ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ