ಈ ಪ್ರಕಟಣೆ ಮೂಲಕ ಆಟೋ ಚಾಲಕರಿಗೆ ಸೂಚಿಸುವುದೇನೆಂದರೆ, ನಗರದ ಆಟೊ ರಿಕ್ಷಾಗಳು ಪರ್ಮಿಟ್ ಇದ್ದರೆ ಇನ್ಶೂರೆನ್ಸ್ ಇದ್ದರೆ ಹಾಗೂ ಇತರೆ ದಾಖಲಾತಿಗಳಿಲ್ಲದೆ ಓಡಾಡುತ್ತಿದ್ದು ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ತಮ್ಮ ಅಸಮಧಾನ ವ್ಯಕ್ತಪಡಿಸಿ ದೂರುಗಳನ್ನು ನೀಡಿರುತ್ತಾರೆ.
ಆದ್ದರಿಂದ ದಿನಾಂಕ 05-02-2021 ರಿಂದ ನಗರದಲ್ಲಿ ಪೊಲೀಸ್ ಇಲಾಖೆ ಹಾಗೂ ಆರ್ .ಟಿ .ಓ. ಇಲಾಖೆಯಿಂದ ಜಂಟಿಯಾಗಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ಇಂತಹ ಆಟೋಗಳ ಮೇಲೆ ಕ್ರಮ ಜರುಗಿಸಲು ನಿರ್ಣಯಿ ಸಲಾಗಿದೆ . ಸಾರ್ವಜನಿಕರು ಮತ್ತು ಆಟೊ ಚಾಲಕರು ಸಹಕರಿಸಬೇಕಾಗಿ ವಿನಂತಿ .
ಆಟೋರಿಕ್ಷಾ ಮಾಲೀಕರು ತಮ್ಮ ಆಟೋ ರಿಕ್ಷಾದ ಎಲ್ಲ ಮೂಲ ದಾಖಲಾತಿ ಹಾಗೂ ತಮ್ಮ ಆಧಾರ ಕಾರ್ಡ್ ಮತ್ತು ಮೊಬೈಲ್ ನಂಬರನ್ನು ಸಂಚಾರ ಪೊಲೀಸ್ ಠಾಣೆ 1 & 2 ರಲ್ಲಿ ನೀಡಿದ್ದಲ್ಲಿ ಪರಿಶೀಲಿಸಿ ಸಾರ್ವಜನಿಕರ ಹಾಗೂ ಆಟೋರಿಕ್ಷಾ ಮಾಲೀಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಈ ಕೆಳಗೆ ಕಾಣುವ ಆಟೋ ರಿಕ್ಷಾ ಮಾಲೀಕರ ಹಾಗೂ ಆಟೋ ರಿಕ್ಷಾ ಸಂಬಂಧಿತ ಮಾಹಿತಿಯನ್ನೊಳಗೊಂಡ ಸ್ಟಿಕ್ಕರ್ ಅಂಟಿಸಲಾಗುವುದು
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,