ಕರ್ತವ್ಯ ನಿರ್ವಹಣೆಯಲ್ಲಿ ಕರ್ನಾಟಕ ಪೊಲೀಸರು ದಕ್ಷತೆ, ಪ್ರಾಮಾಣಿಕತೆ ಸಾಬೀತು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಕರ್ತವ್ಯ ನಿಷ್ಠೆ, ಉಗ್ರಗಾಮಿ ಹಾಗೂ ನಕ್ಸಲ್ ಚಟುವಟಿಕೆಗಳ ನಿಗ್ರಹ, ಕಾನೂನು ಮತ್ತು ಸುವ್ಯವಸ್ಥೆ, ಗುಪ್ತವಾರ್ತೆ, ಸಂಗ್ರಹ, ರಸ್ತೆ ಸಂಚಾರ, ಸುರಕ್ಷತೆಯಲ್ಲಿ ಅಸಾಧಾರಣ ಸಾಮರ್ಥ್ಯ ತೋರಿದವರಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಯ ಮೂಲ ಸೌಕರ್ಯಗಳ ಉನ್ನತೀಕರಣ ಹಾಗೂ ಕರ್ತವ್ಯ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಸೌಕರ್ಯವನ್ನು ಸರ್ಕಾರದಿಂದ ಪೂರೈಸಲಾಗಿದ್ದು, ಇತ್ತೀಚಿಗೆ ಕೇಂದ್ರ ಗೃಹ ಸಚಿವರಿಂದ ತುರ್ತು ಸ್ಪಂದನಾ ವಿಭಾಗದಲ್ಲಿ ಕಾರ್ಯಾಚರಣೆಗೆ 150 ವಾಹನಗಳಿಗೆ ಹಸಿರು ನಿಶಾನೆ ತೋರಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಗೃಹ 2020 ಯೋಜನೆಯಡಿ 2, 272,37 ಕೋಟಿ ವೆಚ್ಚದಲ್ಲಿ ಪೊಲೀಸರಿಗಾಗಿ 11 ಸಾವಿರ ಸುಸಜ್ಜಿತ ವಸತಿ ನಿರ್ಮಾಣ ಮಾಡಲಾಗುವುದು, 667 ಕೋಟಿ ವೆಚ್ಚದಲ್ಲಿ ಮಹಿಳೆಯರ ಸುರಕ್ಷತೆಗೆ ನಿರ್ಭಯ ಯೋಜನೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಜಾರಿಯಲ್ಲಿರುವುದಾಗಿ ಹೇಳಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,