ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯು ಪ್ರಾರಂಭಗೊಂಡು 12 ವರ್ಷಗಳು ಸಂದವು. ಈ ಸಂಸ್ಥೆಯು ಕರಾವಳಿ ಭಾಗದ ಜಿಲ್ಲೆಯಾದ ಉಡುಪಿಯಲ್ಲಿ ಕಾರ್ಯವ್ಯಾಪ್ತಿಯನ್ನು ನಡೆಸುತ್ತಿದೆ. ಕ್ರೈಸ್ತ ಸಮುದಾಯದ ಎಲ್ಲಾ ವರ್ಗಗಳನ್ನು ( ರೋಮನ್ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ಸೀರಿಯನ್, ಆರ್ಥೋಡಾಕ್ಸ್ ಇನ್ನಿತರ ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ತರು, ವೃತ್ತಿಪರರು ಹಾಗೂ ಕೃಷಿಕರು ಸದಸ್ಯರಾಗಿರುತ್ತಾರೆ. ಕೇವಲ 30 ಜನ ಅಜೀವ ಸದಸ್ಯರಿಂದ ಪ್ರಾರಂಭಗೊಂಡು ಸಂಸ್ಥೆಯು ಇಂದು 181 ಸದಸ್ಯರನ್ನು ಹೊಂದಿದೆ.
ಅಕ್ಟೋಬರ್ 2 ರಂದು ಪ್ರೇರಣಾ ಪ್ರಶಸ್ತಿ ಹಾಗೂ ಮಹಾಸಭೆ ನಡೆದಿದ್ದ ಸಭೆಯಲ್ಲಿ 18 ಜನ ಬೋರ್ಡ್ ಮೆಂಬರ್ಸ್ ಆಯ್ಕೆಯಾಗಿದ್ದರು. ತಾ! 15-10-2025 ರಂದು ಮಣಿಪಾಲದ ವ್ಯಾಲಿ ವ್ಯೂವ್ ಕಂಟ್ರಿ ಕ್ಲಬ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025-2027 ರ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶ್ರೀ ಜೆರಿ ವಿನ್ಸೆಂಟ್ ಡಾಯಸ್, ಅಧ್ಯಕ್ಷರಾಗಿ ಶ್ರೀ ಅಲ್ವಿನ್ ಕ್ವಾಡ್ರಸ್- ಕೋಟ, ಉಪಾಧ್ಯಕ್ಷರಾಗಿ ಶ್ರೀ ಜಿತೇಂದ್ರ ಫುರ್ಟಾಡೊ – ಫಲಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ವಿಲ್ಸನ್ ಡಿಸೋಜ ಶಿರ್ವ, ಜೊತೆ ಕಾರ್ಯದರ್ಶಿಯಾಗಿ ಶ್ರೀ ಜೀವನ್ ಸಾಲಿನ್ಸ್- ಕುಂದಾಪುರ, ಕೋಶಾಧಿಕಾರಿಯಾಗಿ ಶ್ರೀ ಮೆಕ್ಸಿಮ್ ಸ್ಟೀಫನ್ ಸಲ್ಧಾನ ,ಉಡುಪಿ ಹಾಗೂ ನಿಕಟ ಪೂರ್ವ ಅಧ್ಯಕ್ಷರಾಗಿ ಶ್ರೀ ಸಂತೋಷ್ ಡಿಸಿಲ್ವ- ಕಾರ್ಕಳ ಚುನಾಯಿತರಾದರು.
ನಿರ್ದೇಶಕ ಮಂಡಳಿ | ಶ್ರೀ ಲುವಿಸ್ ಲೋಬೊ – ಕಲ್ಮಾಡಿ, ಶ್ರೀ ಗ್ರೆಗೊರಿ ಮಿನೇಜಸ್ – ಬೆಳ್ಮಣ್, ಶ್ರೀ ವಾಲ್ಟರ್ ಸಲ್ಧಾನ- ಉಡುಪಿ, ಶ್ರೀ ಡೆರಿಕ್ ಡಿಸೋಜ -ಸಾಸ್ತಾನ, ಶ್ರೀ ಡಾಲ್ಫಿ ಮಸ್ಕರೇನ್ಹಸ್ – ಉಡುಪಿ, ಶ್ರೀ ಜೆರಾಲ್ಡ್ ಫೆರ್ನಾಂಡಿಸ್- ಮೂಡುಬೆಳ್ಳೆ, ಶ್ರೀ ಜೋನ್ಸನ್ ಅಲ್ಮೇಡ- ಕುಂದಾಪುರ, ಶ್ರೀ ಪ್ರಕಾಶ್ ಪಿಂಟೊ- ಕಾರ್ಕಳ, ಶ್ರೀ ಪ್ರಶಾಂತ್ ಜತ್ತನ್ -ಕಟಪಾಡಿ, ಶ್ರೀ ಫ್ರಾನ್ಸಿಸ್ ಡಿಸೋಜ -ಪಲಿಮಾರ್, ಶ್ರೀ ಟೆರೆನ್ಸ್ ಸುವಾರಿಸ್- ಉಡುಪಿ, ಶ್ರೀ ಆಲಾನ್ ವಾಸ್ -ಬ್ರಹ್ಮಾವರ
ಸಮಾರಂಭವು ಕುಟುಂಬ ಸಮ್ಮಿಲನದೊಂದಿಗೆ ಸಮಾಷ್ಟ್ರಗೊಂಡಿತ್ತು.