ದಿನಾಂಕ:11/11/2025 ರಂದು ಪಿರ್ಯಾದಿದಾರರಾದ ರಫೀಕ್ ಮತ್ತು ಅವರ ಮಗ ಶಾರೀಕ್ ರವರು ಮಧ್ಯಾಹ್ನ ಸಮಯ ಸುಮಾರು 03:30 ಗಂಟೆಗೆ ತಮ್ಮ ಮನೆಯ ಸುತ್ತಲೂ ಕಂಪೌಂಡ್ ನ್ನು ಕಟ್ಟಿಸುತ್ತಿರುವಾಗ ಆರೋಪಿಗಳಾದ ಹುಸೇನ್ ಮತ್ತು ಅವರ ಮಗ ತಮೀಮ್ ರವರು ಕಾರಿನಲ್ಲಿ ಬಂದು “ಕಂಪೌಂಡ್ ನ್ನು ಕಟ್ಟಿದರೆ ನಿಮ್ಮನ್ನು ಕೊಂದು ಹಾಕುತ್ತೇನೆ ರಂಡೇ ಮಗ, ನಾಯಿಮಗ” ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರಾದ ಮಹಮ್ಮದ್ ರಫೀಕ್ ರವರನ್ನು ಕೊಲ್ಲಲು ಪ್ರಯತ್ನಿಸಿದ್ದು ಆಗ ಶಾರಿಕ್ ತಪ್ಪಿಸಲು ಅಡ್ಡವಾಗಿ ಬಂದಾಗ ತಮೀಮ್ ರವರು ಶಾರೀಕ್ ರವರ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಹೋಗುವಾಗ ಹುಸೇನ್ ರವರು ಶಾರೀಕ್ ರವರನ್ನು ಕೊಲ್ಲುವ ಉದ್ದೇಶದಿಂದ ಶಾರೀಕ್ ನ ಬೆನ್ನಿನ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಚುಚ್ಚಿರುತ್ತಾರೆ ಎಂಬಿತ್ಯಾದಿಯಾಗಿ ರಫೀಕ್‌ರವರು ನೀಡಿದ ಪಿರ್ಯಾದಿನಂತೆ ಹಿರಿಯಡಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 79/2025, ಕಲಂ: 109, 352, 351(2), 329(3) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿರುತ್ತದೆ.

ಪುನೀತ್ ಕುಮಾರ್ ಬಿ.ಇ ಪಿ.ಎಸ್.ಐ (ಕಾ&ಸು) ಹಿರಿಯಡಕ ಪೊಲೀಸ್ ಠಾಣೆ ಹಾಗೂ ಅವರ ತಂಡ ಆರೋಪಿಗಳಾದ 1)ಹುಸೇನ್ ಶೇಖ್ ಅಹಮ್ಮದ್(74), ತಂದೆ: ಶೇಖ್ ಅಹಮ್ಮದ್ ವಿಳಾಸ: ವಾಸಿಮ್ ಮಂಜಿಲ್, ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಎದುರುಗಡೆ, ಹಿರಿಯಡಕ, ಉಡುಪಿ ತಾಲೂಕು ಮತ್ತು, 2) ತಮೀಮ್ ಹುಸೇನ್ ಶೇಖ್ (34), ತಂದೆ:ಹುಸೇನ್ ಶೇಖ್, ವಿಳಾಸ: ಅಮೃತ್ ಸರ್ಕಲ್ ಹಿಂಬದಿ, ರೂಂ ನಂಬರ್ 318/ಸಿ, ಸಾಗರ್ ಪಾರ್ಕ್, ಘಾಟ್‌ಕೋಪರ್ ಪಶ್ಚಿಮ, ಮುಂಬೈ, ಮಹಾರಾಷ್ಟ್ರ ರವರನ್ನು ದಿನಾಂಕ 15/11/2025 ರಂದು ದಸ್ತಗಿರಿ ಮಾಡಲಾಗಿರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ KA 20 MA 7860 ನೇ ಮಾರುತಿ ಸುಜುಕಿ ಸಿಯಾಜ್ ಕಾರು ಮತ್ತು ಕಬ್ಬಿಣದ ಕಟ್ಟರನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು 2ನೇ ಆರೋಪಿ ತಮೀಮ್ ಹುಸೇನ್ ಶೇಖ್ ನನ್ನು ದಿನಾಂಕ 15/11/2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ, 1ನೇ ಆರೋಪಿ ಹುಸೇನ್ ಶೇಖ್ ಅಹಮ್ಮದ್ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಮಯ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತನು ಆರೋಗ್ಯ ಸಮಸ್ಯೆ ಇರುವುದಾಗಿ ತಿಳಿಸಿದ್ದರಿಂದ ಆತನನ್ನು ವೈದ್ಯರು ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದು, ದಿನಾಂಕ 18/11/2025 ರಂದು ಆತನನ್ನು ವೈದ್ಯರು ಚಿಕಿತ್ಸೆ ನಂತರ ಬಿಡುಗಡೆ ಮಾಡಿದ್ದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ



