ಉಡುಪಿ ಡಿಸೆಂಬರ್ 6 ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ SCDCC ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರು ಹೊಸ ಬೊಲೆರೋ ವಾಹನವನ್ನು ಹಸ್ತಾಂತರಿಸಿದರು
ಪೊಲೀಸ್ ಇಲಾಖೆಗೆ ವಾಹನ ಅಗತ್ಯವನ್ನು ಮನಗೊಂಡು ಬುಲೆರೋ ವಾಹನವನ್ನು ಕೊಡುಗೆಯಾಗಿ ನೀಡಿದ್ದೇವೆ ವಾಹನ ನೀಡುವಂತೆ ಮನವಿ ಬಂದಾಗ ಬ್ಯಾಂಕ್ ತಕ್ಷಣ ಸ್ಪಂದಿಸಿ ವಾಹನ ಒದಗಿಸಿದ್ದೇವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರಿಗೆ ವಾಹನದ ಕೀಲಿ ಕೈಯನ್ನು ಹಸ್ತಾಂತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ವತಿಯಿಂದ ಉಡುಪಿ ಜಿಲ್ಲಾ ವರಿಷ್ಟಾಧಿಕಾರಿ ಹರಿರಾಮ್ ಅವರನ್ನು ಸನ್ಮಾನಿಸಲಾಯಿತು
ಪೊಲೀಸ್ ಇಲಾಖೆಗೆ ವಾಹನ ನೀಡಿರುವುದಕ್ಕೆ ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಲಾಯಿತು
ಬ್ಯಾಂಕಿನ ನಿರ್ದೇಶಕರುಗಳಾದ ಡಾ. ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಗೋಪಾಲಕೃಷ್ಣ ಭಟ್, ಉಡುಪಿ ಡಿವೈಎಸ್ಪಿ ಪ್ರಭು ಡಿ ಟಿ ಉಪಸ್ಥಿತರಿದ್ದರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






