ಉಡುಪಿ ಜಿಲ್ಲಾ ಪೋಲಿಸ್ ವತಿಯಿಂದ ತಾ! 12-09-2025 ರಂದು ಉಡುಪಿ ಪರೇಡ್ ಗೌಂಡ್ ಆಯೋಜಿಸಿದ ಅಭಿನಂದನಾ | ಸಭಾರಂಭದಲ್ಲಿ ಶಿರ್ವ ಠಾಣೆಯಲ್ಲಿ ಅಪರಾಧ ನಂ – 43/25 82/25 ರಲ್ಲಿ ಕುಖ್ಯಾತ ಅಂತರ್‌ರಾಜ್ಯ ಕಳ್ಳ ಸುಮಾರು 45 ವರ್ಷದಿಂದ ಜಾಣಾಕ್ಷತನದಿಂದ ಕಳ್ಳತನ ಮಾಡಿ ಎಲ್ಲರಿಂದ ತಪ್ಪಿಸಿಕೊಂಡಿರುವ ಇತ್ತೆ ಬರ್ಪೆ ಅಬೂಬಕ್ಕರ್ ನನ್ನು ಇತ್ತೀಚೆಗೆ ಮೂಡಬಿದ್ರೆಯಲ್ಲಿ ಬಂಧಿಸಿರುವ ಸಲುವಾಗಿ ಹಾಗೂ ತ್ವರಿತವಾಗಿ ಅಪರಾಧವನ್ನು ಪತ್ತೆ ಹಚ್ಚಿ ಬಂಧಿತನಿಂದ ಸೊತ್ತುಗಳನ್ನು ವಶಪಡೆದುಕೊಂಡು ಶಿಕ್ಷೆಯನ್ನು ಕೊಡಲು ಸಫಲರಾದ ಶಿರ್ವ ಠಾಣಾಧಿಕಾರಿ ಶ್ರೀ ಮಂಜುನಾಥ್ ಮರಬದ, ಶ್ರೀ ಲೋಹಿತ್ ಕ್ರೈಂ ಪಿಎಸ್‌ಐ, ಶ್ರೀ ಮಂಜುನಾಥ್ ಅಡಿಗ ಹೆಡ್ ಕಾನ್ಸೆಬಲ್, ಶ್ರೀ ಸಿದ್ದರಾಯಪ್ಪ ಪೋಲಿಸ್ ಕಾನ್ಸೆಬಲ್, ಶ್ರೀ ಕಿರಣ್ ಪೋಲಿಸ್ ಕಾಸ್ಟೇಬಲ್‌ರವರನ್ನು ಜಿಲ್ಲಾ ವರಿಷ್ಟಾಧಿಕಾರಿ ಶ್ರೀ ಹರಿರಾಮ್ ಶಂಕರ್, ಅಧೀಕ್ಷಕರು ಉಡುಪಿ ಜಿಲ್ಲೆ, ಇವರು ಪ್ರಶಂಸಾ ಪತ್ರವನ್ನು ನೀಡಿ ಅಭಿನಂದಿಸಿದರು.




ಆಗಸ್ಟ್ ತಿಂಗಳಿನಲ್ಲಿ ಪೋಲಿಸ್ ಕಾರ್ಕಳ ಉಪವಿಭಾಗದಿಂದ Cop of the month ನಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಶಿರ್ವ ಠಾಣೆಯ ಪಿಎಸ್‌ಐ ಶ್ರೀ ಮಂಜುನಾಥ್ ಮರಬದ ಹಾಗೂ ಶ್ರೀ ಮಂಜುನಾಥ್ ಅಡಿಗ ಹೆಡ್ ಕಾನ್ಸ್ಟೇಬಲ್ ರವರನ್ನು ಡಾ ಹರ್ಷ ಪ್ರಿಯ ಮಾವದ ಐಪಿಎಸ್ ಸಹಾಯಕ ಅಧೀಕ್ಷಕಿ ಕಾರ್ಕಳ ಇವರು ಸನ್ಮಾನಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ