ಕಾಪು ತಾಲೂಕು ನಡ್ಸಾಲು ಗ್ರಾಮದ ರಾ.ಹೆ 66ರ ಪಕ್ಕದಲ್ಲಿರುವ ಮಹಾದೇವಿ ಟೂರಿಸ್ಟ್ ಹೋಮ್ ಎಂಬ ಲಾಡ್ಜ್ನ 2 ನೇ ಮಹಡಿಯ ರೂಮ್ ನಂ: 208, 209 ನೇದರಲ್ಲಿ ಮಹಿಳೆಯರನ್ನು ಇರಿಸಿಕೊಂಡು ಆರೋಪಿಗಳು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯರಿಂದ ವೈಶ್ಯಾವಾಟಿಕೆ ನಡೆಸುತ್ತಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆ ಇವರಿಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಅಜಮತ್ ಅಲಿ ಸಿಪಿಐ ಕಾಪು ವೃತ್ತರವರು, ಸಕ್ತಿವೇಲು ಇ. ಪಿಎಸ್ಐ ಪಡುಬಿದ್ರಿ ಠಾಣೆ ಮತ್ತು ಇತರ ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ನೊಂದ ಮಹಿಳೆಯರ ಮುಖಾಂತರ ದುರ್ವ್ಯಾಪಾರ ಮಾಡುವ ಬಗ್ಗೆ ಅವರನ್ನು ಪುಸಲಾಯಿಸಿ ಲಾಡ್ಜ್ಗೆ ಕರೆಸಿಕೊಂಡು ಅವರನ್ನು ಗಿರಾಕಿಗಳಿಗೆ ಹಣಕ್ಕೆ ಒದಗಿಸಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಯಿಸಿ ವೇಶ್ಯಾವಾಟಿಕೆಯಿಂದ ಅಕ್ರಮವಾಗಿ ಹಣ ಗಳಿಸುತ್ತಿರುವುದು ಖಚಿತವಾಗಿರುವುದರಿಂದ ಆರೋಪಿಗಳಾದ 1) ಯತಿರಾಜ ಪೊಲ್ಯ ಶೆಟ್ಟಿ(48), ತಂದೆ: ದಿ.ಶೇಖರ ಶೆಟ್ಟಿ, ವಾಸ: 2-10/3. ಭ್ರಾಮರಿ, ಪೊಲ್ಯ ಹೊಸಮನೆ, ಉಚ್ಚಿಲ, ಬಡಾ ಗ್ರಾಮ, ಕಾಪು ತಾಲೂಕು ಮತ್ತು 2) ನವೀನ್ ಪೂಜಾರಿ(39), ತಂದೆ: ಅಪ್ಪು ಪೂಜಾರಿ, ಕಾಡಿಪಟ್ಣ, ನಡ್ಸಾಲು ಗ್ರಾಮ, ಪಡುಬಿದ್ರಿ, ಕಾಪು ತಾಲೂಕು ಎಂಬವರನ್ನು ದಸ್ತಗಿರಿ ನಡೆಸಿ ಸಂತ್ರಸ್ಥ ಮಹಿಳೆಯರನ್ನು ರಕ್ಷಿಸಲಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ : 147/2025 ಕಲಂ 143 BNS ಮತ್ತುಕಲಂ3(1),4,5 ITP Act.ರಂತೆ ಪ್ರಕರಣ ದಾಖಲಿಸಿಕೊಳ್ಳಾಗಿದೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






