ಉಡಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ಬಗ್ಗೆ ಒಟ್ಟು 29 ಪೊಲೀಸ್ ಚೆಕ್ ಪೋಸ್ಟ್ ಗಳನ್ನು ಕಾರ್ಯಾಚರಣೆಯಲ್ಲಿ ಇರಿಸಲಾಗಿರುತ್ತದೆ. ಈ ಚೆಕ್ ಪೋಸ್ಟ್‌ಗಳಲ್ಲಿ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಸಿಬ್ಬಂದಿಯವರನ್ನು ನೇಮಕ ಮಾಡುತ್ತಿದ್ದು ಚೆಕ್ ಪೋಸ್ಟ್ ಕರ್ತವ್ಯದವರು ಮರಳು ಸಾಗಾಟ ಹಾಗೂ ಕೆಂಪು ಕಲ್ಲು, ಶಿಲೆಕಲ್ಲಿ ಹಾಗೂ ಎಮ್ ಸ್ಯಾಂಡ್ ಸಾಗಾಟ ಮಾಡುವ ಎಲ್ಲಾ ವಾಹನಗಳನ್ನು ಚೆಕ್ ಮಾಡಲಾಗುತ್ತಿದೆ.
ದಿನಾಂಕ 06/12/2025ರಿಂದ ಸುಮಾರು 3966 ವಾಹನಗಳನ್ನ ಚೆಕ್ ಮಾಡಲಾಗಿರುತ್ತದೆ. ಇವುಗಳಲ್ಲಿ ಸುಮಾರು 11 ವಾಹನಗಳಲ್ಲಿ ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ, ಯಾವುದೇ ಪರವಾನಿಗೆ ಇಲ್ಲದೇ ಸಾಗಟ ಮಾಡುತ್ತಿರುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಇವುಗಳಲ್ಲಿ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಟ ವಾಹನವನ್ನು ಜಪ್ತಿಮಾಡಿ, ವಾಹನದ ಚಾಲಕ ಮತ್ತು ಮಾಲಕರ ವಿರುಧ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಳಿದ 10 ವಾಹನಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು, ಈ ಬಗ್ಗೆ ಉಡುಪಿ ಗಣಿ ಇಲಾಖೆಗೆ ಮುಂದಿನ ಕ್ರಮದ ಬಗ್ಗೆ ವರದಿ ಕಳುಹಿಸಿಕೊಟ್ಟಿದ್ದು, ಗಣಿ ಇಲಾಖೆಯವರು ಸದ್ರಿ ವಾಹನಗಳ ಆರ್ ಸಿ ಮಾಲಿಕರಿಗೆ ಒಟ್ಟು ರೂಪಾಯಿ 3,08,710/- ರೂ ದಂಡ ವಿಧಿಸಿರುತ್ತಾರೆ.

ಮುಂದೆಯೂ ಸಹ ಸರಕಾರಕ್ಕೆ ಯಾವುದೇ ರಾಯಧನವನ್ನು ಭರಿಸದೇ, ಯಾವುದೇ ಪರವಾನಿಗೆ ಇಲ್ಲದೇ ಸಾಗಟ ಮಾಡುತ್ತಿರುವ ವಾಹನಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






