ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೈಕೋಲೇಔಟ್, 1ನೇ ಕ್ರಾಸ್‌ನಲ್ಲಿ ವಾಸವಿರುವ
ಪಿರಾದುದಾರರು ಸೀರಿಯಲ್ ಪ್ರೊಡಕ್ಷನ್ ಹೌಸ್ ವ್ಯವಹಾರ ಮಾಡಿಕೊಂಡಿರುತ್ತಾರೆ. ಈ ವ್ಯವಹಾರಕ್ಕೆ ಪಿತ್ಯಾದಿಗೆ ಪರಿಚಯವಿರುವ ಇಬ್ಬರನ್ನು ಅವರ ಬಳಿ ಸಹಾಯಕ್ಕಾಗಿ ನೇಮಕ ಮಾಡಿಕೊಂಡಿದ್ದರು. ಇವರುಗಳು ಪಿತ್ಯಾದಿಯ ವ್ಯವಹಾರವನ್ನು ತಿಳಿದುಕೊಂಡಿದ್ದು, ಪಿಕ್ಯಾದಿಗೆ ಶೇ 1 ಕೋಟಿ ರೂಪಾಯಿ ಬ್ಯಾಂಕ್‌ನಿಂದ ಮನೆ ಕಟ್ಟುವ ಸಲುವಾಗಿ ಸಾಲ ಮಂಜೂರಾತಿ ಯಾದ ವಿಚಾರವನ್ನು ಸಹ ತಿಳಿದುಕೊಂಡಿದ್ದರು. ಈ ಇಬ್ಬರು ಸಹಾಯಕರು ದಿನಾಂಕ:12-02-2024 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಪಿತ್ಯಾದಿಯವರ ಮನೆಯಿಂದ ಅವರ ಕಾರನ್ನು ತೆಗೆದುಕೊಂಡು ವೈಯಕ್ತಿಕ ಕೆಲಸದ ಮೇಲೆ ಹೊರಗೆ ಹೋಗಿದ್ದು, ಅದೇ ದಿನ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಸಹಾಯಕರಲ್ಲೊಬ್ಬ ತನ್ನ ಮೊಬೈಲ್ ನಿಂದ ಪಿತ್ಯಾದಿಯವರ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿರುತ್ತಾನೆ. ನಂತರ ದಿನಾಂಕ 13-02-2024 ರಂದು ಸಹ ಪಿರಾದಿಯು ಸಹಾಯಕರಿಗೆ ಕರೆ ಮಾಡಿದ್ದು, ಇಬ್ಬರ ಫೋನ್ ಸ್ವಿಚ್ ಆಫ್ ಎಂದು ಬಂದಿರುತ್ತದೆ. ನಂತರ ದಿನಾಂಕ 14-02-2024 ರಂದು ಮಧ್ಯಾಹ್ನ ಸುಮಾರು 1-50ರ ಸಮಯದಲ್ಲಿ, ಸಹಾಯಕರಲ್ಲೊಬ್ಬ ಮೊಬೈಲ್‌ನಿಂದ ಪಿತ್ಯಾದಿಯ ಮೊಬೈಲ್‌ಗೆ ವ್ಯಾಟ್ಸ್ ಆಫ್ ಕರೆ ಮಾಡಿ, ಅಳುತ್ತಾ ನಮ್ಮಿಬ್ಬರನ್ನು ಯಾರೋ ಅಪರಿಚಿತರು ಕಿಡ್ನಾಪ್ ಮಾಡಿ ಕಾರಿನಲ್ಲಿ ಸುತ್ತಾಡಿಸುತ್ತಿದ್ದಾರೆಂದು ತಿಳಿಸಿರುತ್ತಾರೆ. ನಂತರ ಅವರಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಪಿಲ್ಯಾದಿಯವರಿಗೆ ಕರೆಮಾಡಿ, ನಿಮ್ಮ ಹುಡುಗರು ಬೇಕೆಂದರೆ 1 ಕೋಟಿ ಹಣವನ್ನು ಈ ದಿನ ಸಂಜೆಯೊಳಗೆ ನೀಡಬೇಕು, ಇಲ್ಲವಾದರೆ ಅವರಿಬ್ಬರನ್ನು ಮುಗಿಸುತ್ತೇವೆಂದು ತಿಳಿಸಿ ಕರೆ ಸ್ಥಗಿತಗೊಳಿಸಿರುತ್ತಾರೆ. ನಂತರ ಈ ಕುರಿತು ಪಿರಾದಿಯು ತಮ್ಮೊಡನೆ ಸಹಾಯಕರಾಗಿದ್ದ ಹುಡುಗರನ್ನು ಅಪಹರಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ, ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಯಲ್ಲಿ ಹಣಕ್ಕಾಗಿ ಅಪಹರಣ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಪೊಲೀಸ್ ಇನ್ಸ್‌ಪೆಕ್ಟ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿದ್ದು, ಈ ತಂಡವು ತಾಂತ್ರಿಕ ಮತ್ತು ಟೋಲ್‌ಗಳಲ್ಲಿರುವ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇದರ ಆಧಾರದ ಮೇರೆಗೆ ಈ ಕೃತ್ಯವೆಸಗಿದ ಐದು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಪಿತ್ಯಾದಿಯವರ ಬಳಿ ಸಹಾಯಕರಾಗಿ ಕೆಲಸಕ್ಕಿದ್ದ ಕೆಲವು ವ್ಯಕ್ತಿಗಳು ಪೂರ್ವ ನಿಯೋಜಿತ ಯೋಜನೆಯನ್ನು ಮಾಡಿಕೊಂಡು, ಅಪಹರಣ ಎಸಗಿದ ವ್ಯಕ್ತಿಗಳೊಂದಿಗೆ ಸೇರಿಕೊಂಡು ಈ ಕೃತ್ಯ ಮಾಡಿರುವುದು ತನಿಖೆಯಿಂದ ದೃಢಪಟ್ಟಿರುತ್ತದೆ. ತನಿಖೆ ಮುಂದುವರೆದಿದೆ.
ಬೆಂಗಳೂರು ನಗರ, ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಸೈದುಲು ಅಡಾವತ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀ ಹೆಚ್. ಕೃಷ್ಣಮೂರ್ತಿ, ಎಸಿಪಿ ಮಲ್ಲೇಶ್ವರಂ ಉಪ ವಿಭಾಗ ಮತ್ತು ಶ್ರೀ, ಮಂಜು ಹೆಚ್.. ಪೊಲೀಸ್ ಇನ್ಸ್ಪೆಕ್ಟರ್, ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆ ರವರ ನೇತೃತ್ವದ ತಂಡ ಈ ಕಾರ್ಯಾಚರಣೆ ಮಾಡಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.