ಶಿರ್ವ ಫೆಬ್ರವರಿ 4 ರ: ಕ್ಕೆ ಬಲಿ ಪೂಜೆಯೊಂದಿಗೆ 2026ರ ವಾರ್ಷಿಕ ಹಬ್ಬ ಪವಿತ್ರ ಬಲಿ ಪೂಜೆಯೊಂದಿಗೆ ನೆರವೇರಿತುಫೆಬ್ರವರಿ 3 ಸಾಯಂಕಾಲ 6:30ಕ್ಕೆ ದೇವರ ವಾಕ್ಯದ ಧ್ಯಾನ, ಚರಲ್ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡಿತು.

ಫೆಬ್ರವರಿ 4 ಬುಧವಾರ ವಿಜೃಂಭಣೆಯ ಬಲಿ ಪೂಜೆಯನ್ನು ವಂ. ಸ್ಯಾನಿ ಲೋಬೊ ಮಾಜಿ ಶಿರ್ವ ಚರ್ಚಿನ ಸಹಾಯಕ ಧರ್ಮಗುರುಗಳು, ಮಾಜಿ ವಿಗಾರರ್ ಜನರಲ್, ಪ್ರಸ್ತುತ PRO ಗುಲ್ಬರ್ಗ ಡಯಾಸಿಸ್ ನೆರವೇರಿಸಿದರು. ಹಾಗೂ ಸಾವುದು ಅಮ್ಮನವರ ಆಶೀರ್ವಾದವನ್ನು ಭಕ್ತರ ಮೇಲೆ ಕೋರಿದರು.

ದೇವಾಲಯದ ಬಲಭಾಗದಲ್ಲಿ ಭಕ್ತಾದಿಗಳಿಗೆ ಮೊಂಬತ್ತಿ ಉರಿಸಲು ಹಾಗೂ ಹರಕೆ ಕಾಣಿಕೆಗಳನ್ನು ನೀಡಲು ಅವಕಾಶವನ್ನು ಮಾಡಿಕೊಡಲಾಯಿತು. ಸಾವು ದ್ ಅಮ್ಮನವರ ಪವಾಡ ಮೂರ್ತಿಯನ್ನು ಇರಿಸಿ ಹೂ ಹಾಗೂ ತೀರ್ಥ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಶಿರ್ವಾದ ವಾರ್ಷಿಕ ಹಬ್ಬಕ್ಕೆ ಜಾತಿ ಮತ ಭೇದವಿಲ್ಲದೆ ಎಲ್ಲಾ ಜಾತಿಯ ಧರ್ಮದ ಊರ ಪರವೂರ ಭಕ್ತಾದಿಗಳು ಬಂದು ಹರಕೆಯನ್ನು ತೀರಿಸಿ ಸಾವುದು ಅಮ್ಮನವರ ಕೃಪೆಗೆ ಪಾತ್ರರಾದರು. ಸಂತಮೇರಿ ಸರ್ಕಲ್ ನಿಂದ ಡಾನ್ ಬಾಸ್ಕೋ ಶಾಲೆಯ ದ್ವಾರದವರೆಗೆ ಚರ್ಚಿನ ವಟಾರ 111 ವರ್ಷದ ಪ್ರಸ್ತುತ ಪ್ರಾಚೀನ ದೇವಾಲಯವು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು .

ಪವಿತ್ರ ಬಲಿ ಪೂಜೆ ನಂತರ ಪ್ರಸ್ತುತ ವರ್ಷದಲ್ಲಿ ಸಹಕರಿಸಿದ ಹಾಗೂ ಹಬ್ಬಕ್ಕೆ ಸಹಕರಿಸಿದ ದಾನಿಗಳನ್ನು ಚರ್ಚಿನ ಪ್ರಧಾನ ಧರ್ಮ ಗುರುಗಳಾದ, ನಿಯೋಜಿತ ಉಡುಪಿ ಪ್ರಾಂತ್ಯದ ಧರ್ಮಧ್ಯಕ್ಷರಾದ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಉಪಕಾರ ಸ್ಮರಣೆಯನ್ನು ಮಾಡಿದರು. ಉಡುಪಿ ಧರ್ಮ ಪ್ರಾಂತ್ಯದ ಜುಡಿಷಲ್ ವಿಗಾರ್ ವಂ. ರೋಷನ್ ಡಿಸೋಜರವರು ನಿಯೋಜಿತ ಧರ್ಮಧ್ಯಕ್ಷರನ್ನು ಸ್ಮರಿಸಿ ಶಿರ್ವ ವಾರಡೋ ಪರವಾಗಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

ಶಿರ್ವ ಚರ್ಚಿನ ವತಿಯಿಂದ ಉಪಾಧ್ಯಕ್ಷರಾದ ಜೂಲಿಯನ್ ರೊಡ್ರಿ ಗಸ್, ಕಾರ್ಯದರ್ಶಿಗಳಾದ ಗಿಲ್ಬರ್ಟ್ ಪಿಂಟೋ, ಆಯೋಗದ ಸಂಚಾಲಕಿ ಶಾಲಿನಿ ಕೋರ್ಡ, ಡಾನ್ ಬಾಸ್ಕೋ ಶಾಲೆಯ ಪ್ರಾಂಶುಪಾಲರಾದ ಚರ್ಚಿನ ಧರ್ಮ ಗುರುಗಳು ವಂ. ರೋಲ್ವಿನ್ ಅರನ್ನ ,ಸಹಾಯಕ ಧರ್ಮಗುರುಗಳಾದ ವಂ.ರೋಷನ್ ಡಿಸೋಜ ವಂ. ಅನಿಲ್ ರೊಡ್ರಿಗಸ್ ಸನ್ಮಾನಿಸಿದರು ಪವಿತ್ರ ಬಲಿ ಪೂಜೆಯಲ್ಲಿ ಉಡುಪಿ ಧರ್ಮ ಪ್ರಾಂತ್ಯದ ಚಾನ್ಸ್ ಲರ್ ವಂ.ಸ್ಟೀವನ್ ಡಿಸೋಜಾ,ವಂ. ಫ್ರಾಂಕ್ಲಿನ್ ಡಿಸೋಜಾ ಶಿವಮೊಗ್ಗ,ವಂ.ಚೇತನ್ ಮಚಾದೋ ಯುವ ನಿರ್ದೇಶಕರು ಡೆಲ್ಲಿ, ವಂ. ಡಾ. ಅನಿಲ್ ಕಸ್ತಲಿನೋ ಸೆನೆಟ್ ಕಾರ್ಯದರ್ಶಿ ಉಡುಪಿ ಪ್ರಾಂತ್ಯ, ವಂ.ಕಿರಣ್ (SDB) ಶಿರ್ವ, ವಂ. ಹೆನ್ರಿ ಅಲ್ವಾ ಕೆನಡಾ, ಮಂಗಳೂರು ಹಾಗೂ ಉಡುಪಿ ಧರ್ಮ ಪ್ರಾಂತ್ಯದ ಸರಿಸುಮಾರು 45 ಧರ್ಮ ಗುರುಗಳು, ಶಿರ್ವ ಆರ್ಥಿಕ ಮಂಡಳಿಯ ಸದಸ್ಯರು, ಪಾಲನ ಮಂಡಳಿಯ ಸದಸ್ಯರು, ಧರ್ಮ ಭಗಿನಿಯರು ಹಾಗೂ ಸಮಸ್ತ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸಾವಿರಾರು ಜನರು ಸೇರಿರುವ ವಾರ್ಷಿಕ ಹಬ್ಬಕ್ಕೆ 3 ದಿನಗಳಲ್ಲಿ ವಾಹನ ಸಂಚಾರ, ಶಿಸ್ತು ಪಾಲನೆ ಹಾಗೂ ಬಂಧುಬಸ್ತನ್ನು ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಕ್ರೈಂ ಎಸ್ ಐ ಲೋಹಿತ್ ಕುಮಾರ್ ಹಾಗೂ ಸಿಬ್ಬಂದಿಗಳು ಅಚ್ಚು ಕಟ್ಟಾಗಿ ನೆರವೇರಿಸಿದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







