ಸೈಬರ್ ಅಪರಾಧಗಳಿಗೆ ಬಲಿಯಾಗಿ ತುಂಬಾ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ ವಿದ್ಯಾರ್ಥಿಗಳಾದ ನೀವು ಈ ಬಗ್ಗೆ ಮೊಬೈಲ್ನಲ್ಲಿ ಎಚ್ಚರಿಕೆಯಿಂದ ವ್ಯವಹರಿಸಬೇಕು. ನಿಮ್ಮ ಹೆತ್ತವರಿಗೆ ಮಾಹಿತಿ ನೀಡಬೇಕು ಎಂದು ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಶಕ್ತಿ ವೇಲು ಹೇಳಿದರು
ಅವರು ಅಕ್ಟೋಬರ್ 24ರಂದು ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ ಗೊತ್ತಿಲ್ಲದ ವ್ಯಕ್ತಿಗಳಿಗೆ ಯಾರೂ ಹಣ ವರ್ಗಾವಣೆ ಮಾಡಬಾರದು, ಡಮ್ಮಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ ಹಣ ಕಳೆದುಕೊಳ್ಳಬೇಡಿ ಇನ್ನು ಫೋಟೋಗಳನ್ನು ವಿಡಿಯೋಗಳನ್ನು ಕಳುಹಿಸಿ ಅದನ್ನು ಎಡಿಟ್ ಮಾಡಿ ಫೇಸ್ಬುಕ್ ಇನ್ಸ್ಟಾಗ್ರಾಮ್ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿ ಹಣ ಮರ್ಗಾವಣೆ ಮಾಡುವಂತೆ ಬಲವಂತ ಮಾಡುವ ಮಂದಿ ಬಹಳಷ್ಟು ಇದ್ದಾರೆ ಈ ಬಗ್ಗೆ ಜಾಗೃತರಾಗಿರಿ, ಪರಿಚಿತರಲ್ಲಿ ಮಾತ್ರ ಆನ್ಲೈನ್ ನಲ್ಲಿ ಮಾತನಾಡಬೇಕು ಮೋಸದ ಮೂಲಕ ತೊಂದರೆಗೆ ಒಳಗಾಗದಂತೆ ಯೋಚಿಸಿ ವ್ಯವಹರಿಸಿ ಎಂದು ಮಕ್ಕಳಿಗೆ ಅನೇಕ ಉದಾಹರಣೆ ಸಹಿತ ಶಕ್ತಿ ವೇಲು ಮಾಹಿತಿ ನೀಡಿದರು. ಸಭಾರಂಬದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ್ ಮಾತನಾಡಿ ಮೊಬೈಲ್ ನಲ್ಲಿ ಸೈಬರ್ ಮೋಸಗಳಿಗೆ ಬಲಿ ಆಗಬೇಡಿ ಓದಿಗೆ ಹೆಚ್ಚಿನ ಮಹತ್ವ ನೀಡಿ ಎಂದರು ವಿಜ್ಞಾನ ವಿಭಾಗದ ಸಂಯೋಜಕ ಉತ್ತೇಶ್ ಹಾಗೂ ವಾಣಿಜ್ಯ ವಿಭಾಗದ ಸಂಯೋಜಕ ಜಯಶ್ರೀ ವೇದಿಕೆಯಲ್ಲಿ ಉಪಸಿತರಿದ್ದರು, ಸುಜೀಂದ್ರ ಅಂದೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಸಿದರು, ಕನ್ನಡ ಉಪನ್ಯಾಸಕ ದೇವಿ ಪ್ರಸಾದ್ ಧನ್ಯವಾದವಿತರು
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ
 
			 
		    






