ಆನೇಕಲ್. ಜ. ೧೬ – ಕಂಟೈನರ್ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಅತ್ತಿಬೆಲೆ ಪೋಲಿಸ್ ಠಾಣೆ ವ್ಯಾಪ್ತಿಯ ಬಿದರಗುಪ್ಪೆ ಗ್ರಾಮದ ಸಿಲ್ಕ್ ಪಾರಂ ಬಳಿ ಕಳೆದ ರಾತ್ರಿ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಬಿ.ಎಂ.ಟಿ.ಸಿ. ಚಾಲಕ ವೆಂಕಪ್ಪ ಕತ್ತಿ (೩೭), ಯಡವನಹಳ್ಳಿ ಗ್ರಾಮದ ವಾಸಿ, ಸೂರ್ಯ ಸಿಟಿ ಡಿಪೋದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಬಿ.ಎಂ.ಟಿ.ಸಿ. ಚಾಲಕ ವೆಂಕಪ್ಪ ಕತ್ತಿ ಎಂಬ ವ್ಯಕ್ತಿ ಸರ್ಜಾಪುರದಿಂದ ಅತ್ತಿಬೆಲೆ ಕಡೆಗೆ ಬರುತ್ತಿರುವಾಗಿ ಸಿಲ್ಕ್ ಪಾರಂ ಬಳಿ ಅತ್ತಿಬೆಲೆ ಯಿಂದ ಬಂದ ಕಂಟೈನರ್ ಲಾರಿಗೆ ಮುಖಾಮುಖಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಬಿ.ಎಂ.ಟಿ.ಸಿ. ಚಾಲಕ ವೆಂಕಪ್ಪ ಕತ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅತ್ತಿಬೆಲೆ ಪೋಲಿಸರು ತಿಳಿಸಿದ್ದಾರೆ.