ದಿನಾಂಕ 09.02.2026 ರಂದು ಪಾಂಡೇಶ್ವರ ಗ್ರಾಮದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಬಳಿ ಪಾಂಡೇಶ್ವರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ World Cup T-20 ಮ್ಯಾಚ್ ಗೆ ಸಂಬಂಧಪಟ್ಟು ಸಾರ್ವಜನಿಕರನ್ನು ಒಟ್ಟು ಸೇರಿಸಿಕೊಂಡು ಅವರಿಂದ ಹಣ ಸಂಗ್ರಹಿಸಿ ಆತನ ಮೊಬೈಲ್ ಬಳಸಿ ಆನ್ ಲೈನ್ ನಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬಗ್ಗೆ ಠಾಣಾ ಸಿಬ್ಬಂದಿ ನೀಡಿದ ಖಚಿತ ಮಾಹಿತಿಯಂತೆ ಪ್ರವೀಣ್ ಕುಮಾರ್ ಆರ್ ಪೊಲೀಸ್ ಉಪನಿರೀಕ್ಷಕರು ಕೋಟ ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಧಾಳಿ ನಡೆಸಿದಾಗ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಬೆಟ್ಟಿಂಗ್ ಆಡಿಸುತ್ತಿದ್ದ ಮನಿತ್ ಎಂಬವನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಕ್ರಿಕೆಟ್ ಬೆಟ್ಟಿಂಗ್ ಗೆ ಉಪಯೋಗಿಸುತ್ತಿದ್ದ Iphone ಹಾಗೂ ಬೆಟ್ಟಿಂಗ್ ಹಣ ರೂಪಾಯಿ 800/- ನ್ನು ವಶ ಪಡಿಸಿಕೊಂಡಿರುವುದಾಗಿದೆ. ಆರೋಪಿತ ಮನಿತ್ ಸಂಘಟಿತವಾಗಿ ಇತರರೊಂದಿಗೆ ಸೇರಿಕೊಂಡು ಪ್ರಸ್ತುತ ನಡೆಯುವ ಓಮನ್ ಹಾಗೂ ಜಿಂಬಾಂಬ್ವೆ ಮ್ಯಾಚ್‌ಗೆ ಸಂಬಂಧಪಟ್ಟಂತೆ ಮೊಬೈಲ್ ನಲ್ಲಿರುವ PARKKER777 ಆನ್ ಲೈನ್ ಅಪ್ಲಿಕೇಶನ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಿಸುತ್ತಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 21/2026 ಕಲಂ 112 BNS 78(i)(iii) KP ACT ಕಲಂ 66 IT Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿಯಾದ ಮನಿತ್ (26)ತಂದೆ: ಮಾಧವ ಪುತ್ರನ್ ವಾಸ: ಹಂಗಾರಕಟ್ಟೆ ಬಾಳ್ಕುದ್ರು ಗ್ರಾಮ, ಬ್ರಹ್ಮಾವರ ತಾಲೂಕು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







