ಈರಣ್ಣ ಶಿರಗುಂಪಿ ಪಿಎಸ್‌ಐ (ಎಲ್&ಓ) ಮಲ್ಪೆ ಪೊಲೀಸ್ ಠಾಣೆ ಇವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರ ಜೊತೆ 22:50 ಗಂಟೆಗೆ ಉಡುಪಿ ತಾಲೂಕು ಕಡೆಕಾರು ಗ್ರಾಮದ ಸೀ ವ್ಯೂ ರೆಸಾರ್ಟ್ ಸಮೀಪ ಕಡೆಕಾರ್ ಪಡುಕೆರೆ ಹೊಳೆಯ ಕಡುವಿನ ಬಾಗಿಲು ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇರುವ ಒಂದು ಹಳೆ ತಂಗುದಾಣದಲ್ಲಿ 5-6 ಜನರು ಮೊಬೈಲ್ ಫೋನ್ ಲೈಟ್ ಆನ್ ಮಾಡಿಕೊಂಡು ನ್ಯೂಸ್ ಪೇಪರ್ ಹಾಸಿಕೊಂಡು ಕುಳಿತುಕೊಂಡಿದ್ದು, ಅವರಲ್ಲಿ ಓರ್ವ ವ್ಯಕ್ತಿಯು ಇಸ್ಪೀಟ್ ಎಲೆಗಳನ್ನು ಹಿಡಿದುಕೊಂಡು ಅದೃಷ್ಟದ ಒಂದು ಎಲೆಯನ್ನು ನ್ಯೂಸ್ ಪೇಪರಿನ ಒಂದು ಬದಿಯಲ್ಲಿ ಹಾಕಿ ಸದ್ರಿ ವ್ಯಕ್ತಿಯು ಒಳಗೆ ಹೊರಗೆ ಎಂದು ಹೇಳುತ್ತಾ ತನ್ನ ಕೈಯಲ್ಲಿದ್ದ ಇಸ್ಪೀಟ್ ಎಲೆಗಳನ್ನು ಹೊರಗಡೆ ಮತ್ತು ಒಳಗಡೆ ಹಾಕುತ್ತಿದ್ದು, ಉಳಿದವರು ತಮ್ಮ ಕೈಯಲ್ಲಿ ಹಣವನ್ನು ಹಿಡಿದುಕೊಂಡು ಒಳಗೆ- ಹೊರಗೆ ಎಂದು ಹೇಳುತ್ತಾ ಹಣವನ್ನು ಪೇಪರಿನ ಮೇಲೆ ಹಾಕಿ ಮೊಬೈಲ್ ಫೋನ್ ಲೈಟ್ ಬೆಳಕಿನ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಾ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 23.00 ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿದಾಗ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದವರ ಪೈಕಿ ಓರ್ವ ವ್ಯಕ್ತಿ ಓಡಿಹೋಗಿದ್ದು, ಉಳಿದ 5 ಜನರನ್ನು ಸುತ್ತುವರಿದು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ, 1). ನಿತಿನ್ ರಾಜ್(35), ತಂದೆ: ಯಶವಂತ ಕೊಠಾರಿ, ಕೊಟ್ರಗುತ್ತು ಬಳಿ, ಅಂಬಲ್ಲಮೊಗರು, ಉಲ್ಲಾಲ, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. 2). ಸಚಿನ್ ಆರ್ ಶೆಟ್ಟಿ (35), ತಂದೆ: ರಮೇಶ್ ಶೆಟ್ಟಿ, ಪರಂಬೆಟ್ಟು ಮನೆ, ಪಡು ಪಲಿಮಾರು ಅಂಚೆ, ಪಲಿಮಾರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ. 3). ಸತೀಶ್ @ ಕಿಶೋರ್(38), ತಂದೆ: ಕೇಶವ ಕೊಠಾರಿ, ಕಂಕನಾಡಿ, ಕುದುಕೋರಿ ಗುಡ್ಡೆ ಬೈಪಾಸ್ ರಸ್ತೆ, ಕಂಕನಾಡಿ ಗ್ರಾಮ, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, 4). ರಂಜಿತ್ ಕೆ ಅಮೀನ್(39), ತಂದೆ: ಕಮಲಾಕ್ಷ, ವಾಸ: ನಂಬ್ರ: 12/3, ವಿನಾಯಕ ವಿಹಾರ್, ಕುಲಾಲ್ ಭವನ್ ಎದುರು, ಜಯನಗರ ರೋಡ್, ತಡಂಬೈಲು, ಸುರತ್ಕಲ್, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಮತ್ತು 5). ರವಿ(36), ತಂದೆ: ಯಮುನಪ್ಪ ರಾಥೋಡ್, ಸದಾಶಿವ ನಗರ 1 ನೇ ಕ್ರಾಸ್ ರಸ್ತೆ, ಸುರತ್ಕಲ್, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಎಂದು ತಿಳಿಸಿದ್ದು, ಓಡಿ ಹೋದ ವ್ಯಕ್ತಿಯ ಬಗ್ಗೆ ಕೇಳಲಾಗಿ ಆತನು ಉದ್ಯಾವರದ ಕಿಶೋರ ಎಂದು ತಿಳಿಸಿರುತ್ತಾರೆ. ತಕ್ಷೀರು ಸ್ಥಳದಲ್ಲಿದ್ದ ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸ್ವತ್ತುಗಳಾದ 1) ಹಳೆ ನ್ಯೂಸ್ ಪೇಪರ್-4 ಹಾಳೆಗಳು, 2) ಡೈಮಾನ್, ಆಟಿನ್, ಇಸ್ಪೀಟ್, ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು. 3) ನಗದು ಹಣ ರೂ 500 ರ ಮುಖ ಬೆಲೆಯ ಒಟ್ಟು 780 ನೋಟುಗಳು = ರೂ 3,90,000/- , ರೂ 100 ರ ಮುಖ ಬೆಲೆಯ ಒಟ್ಟು 1004 ನೋಟುಗಳು = ರೂ 1,00,400/-, ರೂ 200 ರ ಮುಖ ಬೆಲೆಯ 2 ನೋಟುಗಳು = ರೂ 400/-, ರೂ 50 ರ ಮುಖ ಬೆಲೆಯ 2 ನೋಟುಗಳು = ರೂ 100/-, ರೂ 20 ರ ಮುಖ ಬೆಲೆಯ 1 ನೋಟು = ರೂ 20/- ಒಟ್ಟು ನಗದು ಹಣ ರೂ : 4,90,920/- ಹಾಗೂ ಬೆಳಕಿಗೆ ಉಪಯೋಗಿಸಿದ 4 ಮೊಬೈಲ್ ಫೋನ್ ಗಳಿದ್ದು, 1). VIVO ಕಂಪೆನಿಯ ಟಚ್ ಸ್ಕ್ರೀನ್ ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 3,000/- 2). VIVO ಕಂಪೆನಿಯ ಟಚ್ ಸ್ಕ್ರೀನ್ ಮೊಬೈಲ್‌ಫೋನ್-1, ಅಂದಾಜು ಮೌಲ್ಯ ರೂ. 3,500/- 3). NOKIA ಕಂಪೆನಿಯ ಕೀ ಪ್ಯಾಡ್ ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 1000/- 4). NOKIA ಕಂಪೆನಿಯ ಕೀ ಪ್ಯಾಡ್ ಮೊಬೈಲ್ ಫೋನ್-1, ಅಂದಾಜು ಮೌಲ್ಯ ರೂ. 1000/- 5) ಕಪ್ಪು ಬಣ್ಣದ ಮೊಬೈಲ್ ಪವರ್ ಬ್ಯಾಂಕ್ -1 ಇದರ ಅಂದಾಜು ಮೌಲ್ಯ ರೂ : 500/- ಹಾಗೂ ಕೃತ್ಯಕ್ಕೆ ಬಳಸಿದ 1) TOYOTA ಕಂಪೆನಿಯ ಬಳಿ ಬಣ್ಣದ KA 47 P 0047 ನೇ ನಂಬ್ರದ FORTUNER ಕಾರು ಅಂದಾಜು ಮೌಲ್ಯ : ರೂ 30,00,000/- ಆಗಬಹುದು. 2). KA 19 MM 8550 ನೇ ನಂಬ್ರದ ಮಾರುತಿ ಸುಜುಕಿ ಕಂಪೆನಿಯ ಬಳಿ ಬಣ್ಣದ swift ಕಾರು ಅಂದಾಜು ಮೌಲ್ಯ : ರೂ 4,00,000/- ನ್ನು ಪಂಚರ ಸಮಕ್ಷಮ ಸ್ವಾಧೀನ ಪಡಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 17/2026, ಕಲಂ: 112 BNS 2023, 87 KP Act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಲ್ಲಾ ಐದು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






