ದಿನಾಂಕ 24-10-2025 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಮತ್ತು ನಶ ಮುಕ್ತ ಭಾರತ ಕಾರ್ಯಕ್ರಮವನ್ನು ಹಿಂದೂ ಪದವಿ ಪೂರ್ವ ಕಾಲೇಜು ಶಿರ್ವ ಮತ್ತು ಜ್ಞಾನಚೇತನ ಎಜ್ಯುಕೇಶನ್ ಟ್ರಸ್ಟ್ ಇವರ ಸಹಭಾಗಿತ್ವದೊಂದಿಗೆ ಕಾಲೇಜಿನ ಸಭಾ ಭವನದಲ್ಲಿ ನಡೆಸಲಾಯಿತು.
ಮಾದಕ ವಸ್ತುಗಳು ಮಾನವನ ದೇಹ ಮತ್ತು ಮನಸ್ಸಿಗೆ ಅಪಾಯಕಾರಿಯಾಗಿವೆ. ಅವು ಕ್ಷಣಿಕ ಆನಂದ ನೀಡಬಹುದು ಆದರೆ ಜೀವನವನ್ನು ನಾಶಮಾಡುವ ಶಕ್ತಿ ಹೊಂದಿವೆ. ಯುವಜನತೆ ಈ ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಜೀವನ ನಡೆಸಬೇಕು. ” ನಶೆ ಜೀವನವಲ್ಲ – ನಾಶದ ದಾರಿ” ಎಂಬ ಸಂದೇಶವನ್ನು ಎಲ್ಲೆಡೆ ಹರಡಬೇಕು. ಕುಟುಂಬ, ಶಾಲೆ ಮತ್ತು ಸಮಾಜದ ಸಹಕಾರದಿಂದ ಮಾತ್ರ ಮಾದಕ ವಸ್ತು ಮುಕ್ತ ಭಾರತ ಸಾಧ್ಯ.
ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪಾಯಗಳು ಹೆಚ್ಚುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಆಜ್ಞಾತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಮೋಸ, ಹ್ಯಾಕಿಂಗ್, ಸೈಬರ್ ಬಲಿ ಇತ್ಯಾದಿ ಅಪಾಯಗಳಿಂದ ರಕ್ಷಣೆ ಪಡೆಯಲು ಜಾಗತಿಯಿಂದ ನಡೆಯುವುದು ಅಗತ್ಯ. ಎಂದು ಹೇಳಿ ಸೂಕ್ತ ಮಾಹಿತಿಯನ್ನು ನೀಡಿದರು.
ನಶೆಮುಕ್ತ, ಸೈಬರ್ ಸುರಕ್ಷಿತ ಭಾರತ ನಮ್ಮೆಲ್ಲರ ಗುರಿಯಾಗಿರಲಿ ಎಂದರು.
ಈ ಕಾರ್ಯಕ್ರಮಕ್ಕೆ ಶ್ರೀ ಹೆಚ್. ಸಿ. ಮಂಜುನಾಥ್ ಆಡಿಗ, ಶ್ರೀ ಪ್ರಕಾಶ್ ಗುಡಿಗಾರ್, ಶ್ರೀ ಅರುಣ್ ಕುಮಾರ್, ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದು, ಕಾಯಕ್ರಮದ ಪ್ರಯೋಜನವನ್ನು ಪಡೆದರು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







