ದಿನಾಂಕ:12/06/2024 ರಂದು ಇಂದಿರಾನಗರ ಪೊಲೀಸ್ ಠಾಣಾ ಸರಹದಿನ ಹೆಚ್.ಎ.ಎಲ್ 3ನೇ ಹಂತ, 80 ಅಡಿ ರಸ್ತೆಯಲ್ಲಿರುವ ಟೆಲ್ ರೂಂ ಹಾಲ್, ಪೋಕರ್ ಗೇಮ್ ಕ್ಲಬ್‌ನಲ್ಲಿ ಅಕ್ರಮ ಜೂಜಾಟ ನಡೆಸುತ್ತಿದ್ದ ಬಗ್ಗೆ ಭಾತ್ಮೀದಾರರಿಂದ ಖಚಿತ ಮಾಹಿತಿಯೊಂದು ಇಂದಿರಾನಗರ ಪೊಲೀಸರಿಗೆ ದೊರೆತಿದ್ದು, ಆ ಸ್ಥಳದ ಮೇಲೆ ದಾಳಿ ನಡೆಸಿ 21 ಜನರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅವರ ವಶದಿಂದ 19 ಮೊಬೈಲ್ ಫೋನ್‌ಗಳು, ಜೂಜಾಟಕ್ಕೆ ಬಳಸುತ್ತಿದ್ದ SS4 ಟೋಕನ್‌ಗಳು/ಚಿಪ್ಸ್ಗಳು ಹಾಗೂ 21,500/- ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ, ಕರ್ನಾಟಕ ಪೊಲೀಸ್ ಕಾಯ ರೀತ್ಯ ಪ್ರಕರಣದ ದಾಖಲಾಗಿದ್ದು, MAYA GAMING AND TECHNOLOGIES PRIVATE LTD ಹೆಸರಿನಲ್ಲಿ ಕಂಪನಿಯನ್ನು ಪ್ರಾರಂಭಿಸಿ, ಅಕ್ರಮ ಲಾಭಗಳಿಸುವ ಉದ್ದೇಶದಿಂದ ಕೆಲವೊಬ್ಬರನ್ನು ಸದಸ್ಯರನ್ನಾಗಿ ಮಾಡಿಕೊಂಡು, ಸದಸ್ಯರಲ್ಲದವರನ್ನು ಒಳಗೊಂಡಂತೆ ಸಾರ್ವಜನಿಕರನ್ನು ವಿಶೇಷವಾಗಿ ಯುವಕರನ್ನು ಜೂಜಾಟಕ್ಕೆ ಪ್ರೇರೇಪಿಸಿ, ಸಾಮಾನ್ಯ ಜೂಜಿನ ಮನೆಯನ್ನು ಪ್ರಾರಂಭಿಸಿ, ಜೂಜಾಟ ನಡೆಸುತ್ತಾ ಕಮೀಷನ್ ಹೆಸರಿನಲ್ಲಿ ಲಾಭಾಂಶವನ್ನು ಅಕ್ರಮವಾಗಿ ಗಳಿಸುತ್ತಿರುವುದು ಮತ್ತು ಮಾನ್ಯ ಗೌರವಾನ್ವಿತ ನ್ಯಾಯಾಲಯಗಳು ನೀಡಿರುವ ನಿರ್ದೇಶನಗಳನ್ನು ಪಾಲಿಸದೇ ನಿಯಮಗಳನ್ನು ಉಲ್ಲಂಘಿಸಿರುವುದಲ್ಲದೇ, ನಿಯಮಬಾಹಿರವಾಗಿ ಜೂಜಾಟದಲ್ಲಿ ತೊಡಗಿದವರಿಗೆ ಸಿಗರೇಟ್ ಸೇದಲು ಅವಕಾಶ ಮಾಡಿಕೊಟ್ಟು ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.
ಬೆಂಗಳೂರು ನಗರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀಕುಲದೀಪ್ ಕುಮಾ ಆರ್. ಜೈನ್ ಮತ್ತು ಹಲಸೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ರಂಗಪ್ಪ ಟಿ ರವರ ಮಾರ್ಗದರ್ಶನದಲ್ಲಿ ಇಂದಿರಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಸುದರ್ಶನ್ ಹೆಚ್.ವಿ ರವರ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.