ಜಿಲ್ಲಾ ಅಭಿಯೋಜನಾ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಇಂದು ಕಲಂ 293 CRPC ಅಡಿಯಲ್ಲಿ ನೀಡಲಾದ ತಜ್ಞ ವರದಿಗಳನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿ ಸಾಕ್ಷ್ಯ ನೀಡುವಾಗ ಮತ್ತು ಕೋರ್ಟ್ ನಲ್ಲಿ ವಿಡಿಯೋ ಸಂವಾದ ನಡೆಸುವಾಗ ಅನುಸರಿಸಬೇಕಾದ ನಿಯಮಗಳ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು. ಗೌರವಾನ್ವಿತ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆದ ಶ್ರೀ.ರಘುನಾಥ್ ಎಂ.ಎಲ್ ರವರು, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ […]
Mysuru police
ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ
ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖ್ಯಾತ ರಂಗಭೂಮಿ ಕಲಾವಿದರಾದ ಶ್ರೀಮತಿ.ಸರೋಜ ಹೆಗಡೆ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಅನನ್ಯ ಚೇತನ್ ರವರು , ಮಣಿಪಾಲ್ ಆಸ್ಪತ್ರೆ ಸ್ತ್ರೀ & ಪ್ರಸೂತಿ ತಜ್ಞೆ ಡಾ. ಮಧುರಾ ಪಾಟಕ್ ರವರು ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್.ಆರ್.ಐಪಿಎಸ್ ರವರು, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಶಿವಕುಮಾರ್ ರವರು ಹಾಗೂ ಜಿಲ್ಲೆಯ ಮಹಿಳಾ ಅಧಿಕಾರಿ […]
ಮೈಸೂರು ಜಿಲ್ಲಾ ಪೊಲೀಸ್- ಠಾಣಾ ಪರಿವೀಕ್ಷಣೆ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು ಹುಣಸೂರು ಪಟ್ಟಣ ಪೊಲೀಸ್ ಠಾಣಾ ಪರಿವೀಕ್ಷಣೆ ನಡೆಸಿದರು. ಇದೇ ವೇಳೆ ಠಾಣಾ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ, ನೂತನ ಗಸ್ತು ಪದ್ದತಿಯನ್ನು ಪರಿಣಾಮಕಾರಿಯಾಗಿ ಬಳಸಿ ಅಪರಾಧ ತಡೆ ಮತ್ತು ಅಪರಾಧಿಗಳ ಪತ್ತೆ ಬಗ್ಗೆ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಲು ಸೂಚಿಸಿದರು.
ಮೈಸೂರು ಜಿಲ್ಲಾ ಪೊಲೀಸ್ ಸಹಕಾರ ಸಂಘದ ಸರ್ವ ಸದಸ್ಯರ ಸಭೆ
ಮೈಸೂರು ಚಾಮರಾಜನಗರ ಜಿಲ್ಲಾ ಪೊಲೀಸ್ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಸಂಘದ ಅಧ್ಯಕ್ಷರಾದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರು ಉದ್ಘಾಟಿಸಿದರು. ಇದೇ ವೇಳೆ ಕರ್ತವ್ಯದಿಂದ ನಿವೃತ್ತರಾದ ಅಧಿಕಾರಿ ಸಿಬ್ಬಂದಿಗಳನ್ನು ಬೀಳ್ಕೋಟ್ಟು, ನಿವೃತ್ತಿ ಹೊಂದಿದ್ದಂತಹ ಅಧಿಕಾರಿ ಸಿಬ್ಬಂದಿಗಳನ್ನು ಸಂಘದ ವತಿಯಿಂದ ಅಭಿನಂದಿಸಿದರು. ಅಲ್ಲದೆ ಕ್ರೀಡೆ ವಿದ್ಯಾಭ್ಯಾಸಗಳಲ್ಲಿ ಉತ್ತಮ ಸಾಧನೆಗೈದಿರುವ ಅಧಿಕಾರಿ ಸಿಬ್ಬಂದಿಗಳ ಮಕ್ಕಳನ್ನು ಪ್ರೋತ್ಸಾಹಿಸಿ ಸನ್ಮಾನಿಸಲಾಯಿತು.ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ.ಆರ್. ಶಿವಕುಮಾರ್ ರವರು ಹಾಗೂ ಪೊಲೀಸ್ ಅಧಿಕಾರಿ […]
ನರಸಿಂಹರಾಜ ವಿಭಾಗದ ಪೊಲೀಸರಿಂದ 2ಪ್ರತ್ಯೇಕ ಪ್ರಕರಣಗಳಲ್ಲಿ 3 ಕಳವು ಆರೋಪಿಗಳ ಬಂಧನ
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕನ್ನ ಕಳವು ಪ್ರಕರಣ ಪತ್ತೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ನರಸಿಂಹರಾಜ ವಿಭಾಗದ ಎ.ಸಿ.ಪಿ ರವರ ನೇತೃತ್ವದಲ್ಲಿ 1ವಿಶೇಷ ತಂಡವನ್ನೂ ರಚಿಸಿತ್ತು ,ಕಾರ್ಯಪ್ರವೃತ್ತರಾದ ಈ ವಿಶೇಷ ತಂಡವು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಲಾಗಿ ಆರೋಪಿಗಳು ವಿಜಯನಗರ ಮತ್ತು ಆಲನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕನ್ನ ಕಳವು ಮಾಡಿರುವುದಾಗಿ ತಿಳಿಸಿದ್ದರ ಮೇರೆಗೆ ಆರೋಪಿಗಳಿಂದ ರೂ30,00,000/- ಮೌಲ್ಯದ 626ಗ್ರಾಂ ತೂಕದ ಚಿನ್ನದ ಒಡವೆಗಳು ರೂ40,000/- ನಗದು […]
ಎಂ.ಎಂ.ಡಿ.ಆರ್ ಕಾಯ್ದೆ ಕುರಿತಾದ ಉಪನ್ಯಾಸ ಕಾರ್ಯಕ್ರಮ-ಮೈಸೂರು ಜಿಲ್ಲಾ ಪೊಲೀಸ್
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಅಭಿಯೋಜನಾ ಇಲಾಖೆ ವತಿಯಿಂದ ಎಂ.ಎಂ.ಡಿ.ಆರ್ ಕಾಯ್ದೆ ಕುರಿತಾದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು . ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ.M.L.ರಘುನಾಥ್ ರವರು ಕಾರ್ಯಕ್ರಮ ಉದ್ಘಾಟಿಸಿದರು. 2ನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಧೀಶರಾದ ಶ್ರೀ.ಹೊಸಮನಿ ಪುಂಡಲೀಕ ರವರು, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು DLSA ಸದಸ್ಯ ಕಾರ್ಯದರ್ಶಿಗಳಾದ ಶ್ರೀ.ದೇವರಾಜ […]
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ವಿದೇಶಗಳಲ್ಲಿ ಇರುವಂತೆ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ ಎಂಬ ಹೊಸ ಹುದ್ದೆಗಳನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೃಷ್ಟಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಪರಾಧ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅಲ್ಲಿ ಎಲ್ಲ ರೀತಿಯ ಸಾಕ್ಷ್ಯವನ್ನು ಸಂಗ್ರಹಿಸಿ ಅಪರಾಧಿಯನ್ನು ಪತ್ತೆ ಮಾಡುವಲ್ಲಿ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ (scene of crime officer) ಪರಿಣಿತಿ ಹೊಂದಿರುತ್ತಾರೆ. ಮೊದಲ ಹಂತದಲ್ಲಿ 206 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು. […]
ಮೈಸೂರು ನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಮೈಸೂರು ನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ,ಸುಮಾರು 31 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆಸಾಮಿಯನ್ನು ಬಂಧಿಸಿದ ಪಿರಿಯಾಪಟ್ಟಣ ಪೊಲೀಸರು . ಕಳ್ಳತನ ಪ್ರಕರಣವೊಂದಕ್ಕೆ ಬೇಕಾಗಿದ್ದಕೆ.ಆರ್.ನಗರ ತಾಲ್ಲೋಕು, ಐಚನಹಳ್ಳಿ ಗ್ರಾಮದ ವಾಸಿ ನಾಗರಾಜು ಬಿನ್ ಮಾರಯ್ಯ ಎಂಬುವವನೆ ಬಂಧಿಸಲ್ಪಟ್ಟ ವ್ಯಕ್ತಿಯಾಗಿದ್ದಾನೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್
ಮೈಸೂರು ಜಿಲ್ಲಾ ಪೊಲೀಸ್ ಘಟಕ
ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನಮ್ಮೆಲ್ಲ ಅಧಿಕಾರಿ ಸಿಬ್ಬಂದಿಗಳಿಗಾಗಿ ಯುನೈಟೆಡ್ ಬ್ರೂವರೀಸ್ ಲಿ.ಮತ್ತು ಕ್ರೆಡಿಟ್ ಐ ಸಂಸ್ಥೆ ಜಂಟಿಯಾಗಿ ಜಿಲ್ಲಾ ಪೊಲೀಸ್ ಘಟಕಕ್ಕೆ ಎರಡು oxygen concentrator ಗಳನ್ನು ಹಾಗೂ ಐದು ಸಾವಿರ ಮಾಸ್ಕ್ ಗಳನ್ನು ನೀಡಿದ್ದು, ಯುನೈಟೆಡ್ ಬ್ರೂವರೀಸ್ ಲಿ.ನ ಮುಖ್ಯಸ್ಥರಾದ ಶ್ರೀ.ಶೈಲೇಶ್ ಕುಮಾರ್ , ಕ್ರೆಡಿಟ್ ಐ ಸಂಸ್ಥೆ ಸಿಇಓ ಹಾಗೂ ಮ್ಯಾನೆಜಿಂಜ್ ಟ್ರಸ್ಟಿ ಡಾ.ಎಂ.ಪಿ.ವರ್ಷ, ಯುನೈಟೆಡ್ ಬ್ರೂವರೀಸ್ HR ಶ್ರೀ.ಅಶೋಕ್ […]
ಮೈಸೂರು ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ಮೈಸೂರಿನಲ್ಲಿ ವಾಹನ ತಪಾಸಣೆ ವೇಳೆ ಅಪಘಾತ ಪ್ರಕರಣ ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಮೈಸೂರು ಡಿಸಿಪಿ ಪ್ರಕಾಶ್ಗೌಡ ಮಾಹಿತಿ ನೀಡಿದ್ರು. ವಿಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ 8 ಮಂದಿಯನ್ನು ಬಂಧಿಸಲಾಗಿದೆ. ಇನ್ನು 6 ಮಂದಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿನ ವಿಡಿಯೋ ದೃಶ್ಯಾವಳಿ ಆಧರಿಸಿ ಹಲ್ಲೆ ಮಾಡಿರುವವರ ಗುರುತು ಪತ್ತೆ ಮಾಡಲಾಗುತ್ತಿದೆ. ಘಟನೆ ಸಂಬಂಧ 3 ಕೇಸ್ ದಾಖಲಾಗಿದ್ದು, ವಾಹನ […]