ಪೊಲೀಸ್ ಆಕಾಂಕ್ಷಿಗಳ ಒಂದು ತಿಂಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭವು ದಿನಾಂಕ: 17-09-2021 ರ ಬೆಳಿಗ್ಗೆ 11.00 ಗಂಟೆಗೆ ಗೋನ್ಝಾಗಾ ಹಾಲ್, ಸೈಂಟ್ ಅಲೋಶಿಯಸ್ ಕೊಡಿಯಾಲಬೈಲ್, ಮಂಗಳೂರಿನಲ್ಲಿ ನಡೆಯಿತು. ಒಟ್ಟು 206 ಅರ್ಭ್ಯಥಿಗಳಿಗೆ ತರಬೇತಿ ಕಾರ್ಯಗಾರದ ಪ್ರಯೋಜನ ಪಡೆದಿರುತ್ತಾರೆ.ಮುಂದಿನ ದಿನಗಳಲ್ಲಿ ಅರ್ಭ್ಯಥಿಗಳ ಅವಶ್ಯಕತೆ ಮತ್ತು ಅನುಕೂಲತೆಯನ್ನು ಆಧರಿಸಿ ಮುಂದಿನ ಬ್ಯಾಚ್ ಗಳಲ್ಲಿ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಾತ್ಮಕ […]
Home Minister Karnataka
ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿ ಎಂ ಐ ಟಿ ಕ್ಯಾಂಪಸ್ ನಲ್ಲಿ ಕಾರ್ಯಕ್ರಮ ಉದ್ಘಾಟನೆ
ಸನ್ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ರವರು ಹಾಗೂ ಶ್ರೀ ಬಸವರಾಜ ಬೊಮ್ಮಾಯಿ, ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರು ದಾವಣಗೆರೆ ಜಿಲ್ಲೆ ಹರಿಹರ ತಾ. ಕೊಂಡಜ್ಜಿಯಲ್ಲಿ ನಿರ್ಮಿಸಿರುವ ನೂತನ ಪೊಲೀಸ್ ಪಬ್ಲಿಕ್ ವಸತಿ ಶಾಲೆ ಕಟ್ಟಡಗಳನ್ನು ಹಾಗೂ ದಾವಣಗೆರೆ ನಗರದ ಪಿಜೆ ಬಡಾವಣೆಯಲ್ಲಿ ಪೊಲೀಸ್ ಸಿಬ್ಬಂದಿ & ಅಧಿಕಾರಿಗಳ ನೂತನ ಪೊಲೀಸ್ ವಸತಿ ಗೃಹಗಳನ್ನು ಇಂದು (ದಿ-02-09-21ರಂದು ) ಜಿಎಂಐಟಿ ಕ್ಯಾಂಪಸ್ ಆವರಣದಲ್ಲಿ […]
ತಿಲಕ್ ನಗರ ಪೊಲೀಸರಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು
ಬೆಂಗಳೂರು: ದೇಶದಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮ ಕಳೆಕಟ್ಟಿದೆ. ಕೊರೊನಾ ಇರುವ ಹಿನ್ನೆಲೆ ಸರಳ ಹಾಗೂ ನಿಯಮದ ಪ್ರಕಾರವೇ ಸ್ವಾತಂತ್ರ್ಯ ಹಬ್ಬವನ್ನು ಆಚರಿಸಲಾಗುತ್ತಿದೆ.ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ನಡೆದ ತ್ಯಾಗ ಬಲಿದಾನ ಸ್ಮರಣೆ ಮಾಡುತ್ತಾ ಬೆಂಗಳೂರು ನಗರ ತಿಲಕ್ ನಗರ ಠಾಣೆ ಪೊಲೀಸರು ಧ್ವಜಾರೋಹಣ ನೆರವೇರಿಸುವ ಮೂಲಕ ಸಾಕ್ಷಿಯಾದರು. ನಮ್ಮ ಮುಖ್ಯ […]
ಸಂಚಾರ ನಿರ್ವಹಣಾ ಕೇಂದ್ರ-ಬೆಂಗಳೂರು ನಗರ ಪೊಲೀಸ್
ಮಾನ್ಯ ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ರವರು ಸಂಚಾರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಸಂಚಾರ ಸುವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು,ಈ ಸಂದರ್ಭದಲ್ಲಿ ಮಾನ್ಯ ಶ್ರೀ. ಪ್ರವೀಣ್ ಸೂದ್ ಐಪಿಎಸ್ ಡಿಜಿ & ಐಜಿ ರವರು,ಮಾನ್ಯ ಶ್ರೀ .ಕಮಲ್ ಪಂತ್.ಐಪಿಎಸ್ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಶ್ರೀ .ಡಾ.ಬಿ.ಆರ್.ರವಿಕಾಂತೇಗೌಡ.ಐಪಿಎಸ್ ಜಂಟಿ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಸಂಚಾರ ಮತ್ತು ಬೆಂಗಳೂರು ಸಂಚಾರ ವಿಭಾಗದ ಎಲ್ಲಾ ಡಿಸಿಪಿ ಮತ್ತು […]
80 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ಮಾರಾಟಕ್ಕೆ ಯತ್ನ – ಐವರು ಅರೆಸ್ಟ್
ನಗರದಲ್ಲಿ ಅಕ್ರಮವಾಗಿ (ತಿಮಿಂಗಲದ ವಾಂತಿ) ಅಂಬರ್ ಗ್ರೀಸ್ ಮತ್ತು ಪುರಾತನ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಸಿಸಿಬಿ ಬಂಧಿಸಿದೆ. ಆ್ಯಂಬರ್ ಗ್ರಿಸ್ ಸೇರಿದಂತೆ ಪುರಾತನ ವಸ್ತುಗಳನ್ನ ಅಕ್ರಮವಾಗಿ ಮಾರಾಟಕ್ಕೆ ಯತ್ನಿಸುತ್ತಿದ್ದ ಗ್ಯಾಂಗ್ ನಿಂದ ಬರೋಬ್ಬರಿ 80 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸ್ ಆಯುಕ್ತ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿದ್ದು, ಪ್ರಕರಣ ಸಂಬಂಧ ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40) […]
ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ
ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ವಿದೇಶಗಳಲ್ಲಿ ಇರುವಂತೆ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ ಎಂಬ ಹೊಸ ಹುದ್ದೆಗಳನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೃಷ್ಟಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಪರಾಧ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅಲ್ಲಿ ಎಲ್ಲ ರೀತಿಯ ಸಾಕ್ಷ್ಯವನ್ನು ಸಂಗ್ರಹಿಸಿ ಅಪರಾಧಿಯನ್ನು ಪತ್ತೆ ಮಾಡುವಲ್ಲಿ ‘ಅಪರಾಧ ಸ್ಥಳ ಪರಿಶೀಲನಾಧಿಕಾರಿ’ (scene of crime officer) ಪರಿಣಿತಿ ಹೊಂದಿರುತ್ತಾರೆ. ಮೊದಲ ಹಂತದಲ್ಲಿ 206 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು. […]