ನಂಜುಂಡ B N s/o ನಾಗರಾಜು B V ಬೈರಗೊಂಡನಹಳ್ಳಿ ಕಾಲೋನಿ, ಅರಸೀಕೆರೆ ತಾಲ್ಲೂಕಿನ ನಿವಾಸಿಗೆ ರಸ್ತೆಯಲ್ಲಿ ಒಂದು ಪರ್ಸ್ ಸಿಕ್ಕಿದ್ದು ಅದರಲ್ಲಿ ನಗದು ಹಣ ಹಾಗೂ ಬ್ಯಾಂಕಿಗೆ ಸಂಬಂದಿಸಿದ ದಾಖಲೆಗಳಿದ್ದರು ದುರಾಸೆಗೆ ಒಳಗಾಗದೆ ಅದು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗೆ ಸೇರಿದ್ದೆಂದು ತಿಳಿದು ಅದನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾನೆ. ಇವನ ಕಾರ್ಯಕ್ಕೆ ಶ್ರೀ ಶ್ರೀನಿವಾಸ್ ಗೌಡ IPS, SP ಹಾಸನ ರವರು ಅಭಿನಂದಿಸಿದರು.
Hassan Police
ಅರಸೀಕೆರೆ ನಗರ ಪೊಲೀಸರ ಕಾರ್ಯಾಚರಣೆ ಕಾರು, ಆಟೊ, ಮೋಟಾರ್ ಬೈಕ್, ಕಳ್ಳನ ಬಂಧನ
ಅರಸೀಕೆರೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಇತ್ತೀಚೆಗೆ ಮೋಟಾರ್ ಬೈಕ್ ಗಳು ಕಳ್ಳತನವಾಗಿ ಈ ಸಂಬಂಧ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಇದರ ಸೂರಕ್ಷತೆಯನ್ನು ಅರಿತ ಹಾಸನ ಜಿಲ್ಲೆಯ ಮಾನ್ಯ ಪೊಲೀಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ. ಆರ್ ಶ್ರೀನಿವಾಸ್ ಗೌಡ ಐಪಿಎಸ್ ರವರು ಕಳವಿಗೆ ಸಂಬಂಧಿಸಿದ ಆರೋಪಿಗಳು ಮತ್ತು ಮೋಟಾರ್ ಬೈಕ್ ಗಳ ಪತ್ತೆ ಬಗ್ಗೆ ನುರಿತ ಸಿಬ್ಬಂದಿಗಳ ತಂಡವನ್ನು ರಚಿಸಿ ಶ್ರೀಮತಿ. ನಂದಿನಿ ಮಾನ್ಯ ಅಪರ ಅಧ್ಯಕ್ಷರು ಹಾಸನ […]
ಅಪಹರಣವಾಗ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ಹಸನ ಪೊಲೀಸರು!
ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಅಪಹರಣ ಮಾಡುತ್ತಿದ್ದ ಕಿಡಿಗೇಡಿಗಳ ತಂಡದಿಂದ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ಆತನನ್ನು ರಕ್ಷಿಸಿದ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ. ಹಣಕಾಸಿನ ವಿಷಯ ಸಂಬಂಧ ಕಾಸರಗೋಡಿನ ಅನ್ವರ್(33) ಎಂಬ ಯುವಕನನ್ನು ಕಿಡಿಗೇಡಿಗಳ ತಂಡವೊಂದು ಕಿಡ್ನಾಪ್ ಮಾಡಿ ಹಾಸನಕ್ಕೆ ಎಂಟ್ರಿಯಾಗಿತ್ತು. ಈ ವೇಳೆ ಕಾರು ಗೊರೂರಿನ ಮೂಲಕ ಪಾಸ್ ಆಗುತ್ತಿರುವುದು ತಿಳಿದ ಪೊಲೀಸರು, ಅವರನ್ನು ಹಿಡಿಯುವ ಸಲುವಾಗಿಯೇ ಯಾರಿಗೂ ಅನುಮಾನ ಬಾರದಂತೆ ರಸ್ತೆಗೆ […]