ದಿನಾಂಕ 21.06.2022 ರಂದು ಬೆಳಿಗ್ಗೆ ಕೆ.ಜಿ.ಎಫ್ ಪೊಲೀಸ್ ಜಿಲ್ಲೆ ವತಿಯಿಂದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ “Yoga for Humanity” “ಮಾನವೀಯತೆಗಾಗಿ ಯೋಗ” ಎಂಬ ಘೋಷವಾಕ್ಯದಡಿಯಲ್ಲಿ ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಕೆ. ಧರಣೀದೇವಿ, ಐ.ಪಿ.ಎಸ್, ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಪಿ. ಮುರಳಿಧರ, ಯೋಗ ತರಬೇತುದಾರರಾದ ಶ್ರೀ. ಪ್ರವೀಣ್ ಸಿಂಗ್ ರಾಣ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಾಹಿಸಿದರು.
Kgf District Police
ಕಳವು ಪ್ರಕರಣದ ಆರೋಪಿ ಬಂಧನ 38 ಗ್ರಾಂ ಬಂಗಾರ ವಶ
ರಾಬರ್ಟಸನ್ಪೇಟೆ ಪೊಲೀಸ್ ಠಾಣೆಯ ಮೊ.ಸಂ. 21/2022 ಕಲಂ 454,380 ಐ.ಪಿ.ಸಿ ಹಾಗೂ ಮೊ.ಸಂ 60/2021 ಕಲಂ 454, 4547, 380 ಐ.ಪಿ.ಸಿ ಪ್ರಕರಣಗಳಲ್ಲಿ ಕಳುವಾಗಿರುವ ಮಾಲು & ಆರೋಪಿಗಳ ಪತ್ತೆ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಡಾ|| ಧರಣೀದೇವಿ, ಐಪಿಎಸ್ ಮತ್ತು ಪೊಲಿಸ್ ಉಪಾಧೀಕ್ಷಕರಾದ ಪಿ. ಮುರಳೀಧರ ರವರ ಮಾರ್ಗದರ್ಶನದಂತೆ ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕರಾದ ಕುಮಾರಸ್ವಾಮಿ.ಟಿ.ಆರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಶ್ರೀಮತಿ. ಶೃತಿ, ಪ್ರೋ.ಪಿ.ಎಸ್.ಐ ಶ್ರೀನಿವಾಸ್ ಪ್ರಸಾದ್. ಎಸ್.ಜಿ ಹಾಗೂ ಸಿಬ್ಬಂದಿಯವರನ್ನು […]
ಕೆಜಿಎಫ್-ನೂತನ ಎಸ್ಪಿ ಡಾ|| ಕೆ. ಧರಣಿ ದೇವಿ ಅಧಿಕಾರ ಸ್ವೀಕಾರ
ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಡಾ|| ಕೆ.ಧರಣಿ ದೇವಿ ಅವರು ಶನಿವಾರದಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು. ಇಲ್ಲಿಯವರೆಗೆ ಕೆಜಿಎಫ್ ಎಸ್‌ಪಿ ಪ್ರಭಾರದಲ್ಲಿದ್ದ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ಡಿ.ದೇವರಾಜ್ ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಎಸ್ಪಿ ಡಾ|| ಕೆ.ಧರಣಿ ದೇವಿ ಅವರು ಈ ಹಿಂದೆ ಮೈಸೂರು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಭಾರ ವಹಿಸಿಕೊಂಡ ನಂತರ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಡಾ|| ಕೆ.ಧರಣಿ […]
ಕೆಜಿಎಫ್ : ಪೊಲೀಸ್ ಪೇದೆಯ ಮೇಲೆ ಕೊಲೆಯತ್ನ ನಡೆಸಿದ ಆರೋಪಿಗಳ ಬಂಧನ
ಕರ್ತವ್ಯ ನಿರತ ಪೊಲೀಸ್ ಪೇದೆಯ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆಗೈದು ಕೊಲೆಯತ್ನ ನಡೆಸಿದ ಇಬ್ಬರು ಆರೋಪಿಗಳನ್ನು ಒಂದೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಅಶೋಕ್ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳು ಪಿ.ರಾಜೇಶ್ ಮತ್ತು ಕೆ.ಸಚಿನ್ಸುಧಾಕರ್ ಅವರುಗಳನ್ನು ಕೃತ ವೆಸಗಿದ ೨೪ ಗಂಟೆಗಳಲ್ಲಿಯೇ ಬಂಧಿಸುವಲ್ಲಿ ಸ್ಥಳೀಯ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಮೇ. […]
ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶ ನಿಷೇಧ : ಕೆ .ಜಿ .ಎಫ್. ಪೊಲೀಸ್
ಎಲ್ಲೆಲ್ಲೂ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿಗಳನ್ವಯ ಎಲ್ಲಾ ಧರ್ಮಗಳ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲು ಸಹಕರಿಸಬೇಕೆಂದು ಧಾರ್ಮಿಕ ಕಾರ್ಯಗಳನ್ನು ಸರ್ಕಾರದ ಆದೇಶದಂತೆ ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಕರೆ ನೀಡಿಲಾಗಿದೆ. ದಿನಾಂಕ 22.04.2021 ಗುರುವಾರದಂದು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್ಲಾ ಧರ್ಮಗಳ ಮುಖಂಡರುಗಳ ಶಾಂತಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಇದುವರೆವಿಗೂ ಯಾವುದೇ ರೀತಿಯ ಅಹಿತಕರ […]
ಪ್ರತಿಯೊಬ್ಬರಿಗೂ ನಾಗರೀಕ ಬಂದೂಕು ತರಬೇತಿ ಅವಶ್ಯಕ
ಸಾರ್ವಜನಿಕರು ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸಲು ಪೊಲೀಸ್ ಇಲಾಖೆಯು ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಸಾಕಷ್ಟು ರೀತಿಯಲ್ಲಿ ಕೈಗೊಂಡಿದ್ದು, ಆದಾಗ್ಯೂ ತಮ್ಮ ಆತ್ಮ, ಪ್ರಾಣ, ಆಸ್ತಿ-ಪಾಸ್ತಿ ರಕ್ಷಣೆಗಾಗಿ ಪ್ರತಿಯೊಬ್ಬರಿಗೂ ನಾಗರೀಕ ಬಂದೂಕು ತರಬೇತಿಯ ಅವಶ್ಯಕತೆಯಿದೆ. ಕೆಜಿಎಫ್ನ ಚಾಂಫೀಯನ್ ರೀಫ್ಸ್ ನಲ್ಲಿನ ಡಿಎಆರ್ನಲ್ಲಿ ನಡೆಯುತ್ತಿರುವ ನಾಗರೀಕ ಬಂದೂಕು ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ನೆರವೇರಿಸುವ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕೆಜಿಎಫ್ ಪೊಲೀಸ್ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲ್ಲೂಕುಗಳಿಂದ ೬೦ […]
ಕೆಜಿಎಫ್ ಜಿಲ್ಲಾ ಪೊಲೀಸ್ ಕ್ರೀಡಾಕೂಟ ಯಶಸ್ವಿ, ಐಜಿಪಿ ಅವರಿಂದ ಬಹುಮಾನ ವಿತರಣೆ
ಕೆಜಿಎಫ್ ಪೊಲೀಸ್ ಜಿಲ್ಲೆಯ ೨೦೨೦-೨೧ನೇ ಸಾಲಿನ ಪೊಲೀಸರ ಮತ್ತು ಪೊಲೀಸ್ ಮಕ್ಕಳ ವಾರ್ಷಿಕ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಯಿತು. ಕೆಜಿಎಫ್ನ ಚಾಂಫೀಯನ್ರೀಫ್ಸ್ನಲ್ಲಿನ ಡಿ.ಎ.ಆರ್. ಪೊಲೀಸ್ ಕವಾಯಿತು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ವಾರ್ಷಿಕ ಪೊಲೀಸ್ ಕ್ರೀಡಾಕೂಟವು ಅತ್ಯಂತ ಯಶಸ್ವಿಯಾಗಿ ನಡೆಯಿತು.ಬುಧವಾರದಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಲಯ ಪೊಲೀಸ್ ಮಹಾನಿರೀಕ್ಷಕರಾದ ಎಂ. ಚಂದ್ರಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಜೇತರುಗಳಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು. ವರ್ಷಕ್ಕೊಮ್ಮೆ ನಡೆಯುವ ಪೊಲೀಸ್ […]