ಛಾಯಗ್ರಾಹಕರೇ ಹುಷಾರ್..! ಹೊಸತರಹದ ಸ್ಕ್ಯಾಮ್ ಶುರುವಾಗಿದೆ ನೀವು ಇರುವ ಊರಿನವರೆ ನಾವು ನಮ್ಮ ಮನೆಯಲ್ಲಿ ಒಂದು ಫಂಕ್ಷನ್ ಇದೇ ನಾನು ಇಂಡಿಯನ್ ಆರ್ಮಿ ನಲ್ಲಿ ಕೆಲಸ ಮಾಡುತ್ತಿರುವುದು ಪ್ರೋಗ್ರಾಂ ಬುಕ್ಕ್ ಮಾಡ್ಕೊಳಿ ಆರ್ಮಿ ಅಕೌಂಟ್ ಇಂದ ಅಡ್ವಾನ್ಸ್ ಹಣ ಕಳುಹಿಸುತ್ತೇನೆ ಎಂದು ಹೇಳಿ ಆರ್ಮಿ ಅಕೌಂಟ್ ಇಂದ ಹಣ ಕಳಿಸುವುದು ಸ್ವಲ್ಪ ಪ್ರೋಸಿಜರ್ ಇದೇ ನಿಮ್ಮ ಫೋನ್ ಪೇ ಆಪ್ ಅನ್ನು ಒಪನ್ ಮಾಡಿ ಎಂದು ಹೇಳಿ ಅಮೌಂಟ್ ಅನ್ನು […]
Shivamogga Police
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಆಟೋ ಚಾಲಕರಿಗೆ ಸಭೆ ನಡೆಸಲಾಯಿತು
ದಿನಾಂಕಃ-20-01-2022 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಡಿಎಆರ್ ಸಭಾಂಗಣದಲ್ಲಿ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಆಟೋ ಚಾಲಕರುಗಳ ಸಭೆಯನ್ನು ನಡೆಸಿ, ಸಭೆಯಲ್ಲಿ ಚಾಲಕರಿಗೆ ಸಂಚಾರ ನಿಯಮಗಳ ಕುರಿತಂತೆ ತಿಳುವಳಿಕೆ ನೀಡಿ ಅವರುಗಳ ಕುಂದುಕೊರತೆಯನ್ನು ಆಲಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಶಿವಮೊಗ್ಗ ನಗರದ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ರಸ್ತೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ
ದಿನಾಂಕ 19-01-2022 ರಂದು ಎಎಸ್. ಪಿ ಸಾಗರ ರವರು ಸಾಗರ ಟೌನ್ ವ್ಯಾಪ್ತಿಯಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ನಿಯಮಗಳು ಹಾಗೂ ಅವುಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ರಸ್ತೆ ನಿಯಂತ್ರಣ ನಿಯಮಗಳು 1. ಎಡ ಭಾಗದಲ್ಲಿ ಚಲಿಸಿ :-ಮೋಟಾರು ವಾಹನ ಚಾಲಕನು ಆದಷ್ಟು ರಸ್ತೆ ಎಡಭಾಗದ ಸಮೀಪವಾಗಿ ಚಲಿಸಬೇಕು ಮತ್ತು ತಾನು ಸಾಗುತ್ತಿರುವ ದಿಕ್ಕಿನಲ್ಲೇ ಹೋಗುತ್ತಿರುವ ವಾಹನಗಳಿಗೆ ತನ್ನ ಬಲಭಾಗದಿಂದ ಹೋಗಲು ಅವಕಾಶ ಕೊಡಬೇಕು. 2. ಎಡ ಮತ್ತು ಬಲ […]
ಶಿವಮೊಗ್ಗ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ
ದಿನಾಂಕಃ- 04-05-2021 ರಂದು ಬೆಳಗಿನ ಜಾವ ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆ ರಾಗಿಗುಡ್ಡ ಕ್ರಾಸ್ ನಲ್ಲಿ ಸುನಿಲ್ ರವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಹೋಗುವಾಗ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ಬಂದು ಚಾಕು ತೋರಿಸಿ ಹೆದರಿಸಿ, *ರೂ 500/- ಹಣ, ಮೊಬೈಲ್ ಫೋನ್ ಹಾಗೂ ATM ಕಾರ್ಡ್ ಕಿತ್ತಿಕೊಂಡು* ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕಲಂ 392 ಐಪಿಸಿ ರಿತ್ಯ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಂಡು ದಿನಾಂಕಃ-07-05-2021 […]
ಶಿವಮೊಗ್ಗ ಜಿಲ್ಲಾ ಪೊಲೀಸ್ -ನಿರ್ಗಮನ ಪಥಸಂಚಲನ ನಡೆಯಿತು
ದಿನಾಂಕಃ- 20-04-2021 ರಂದು ಶಿವಮೊಗ್ಗ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿ ಪೂರ್ಣಗೊಳಿಸಿದ 14ನೇ ತಂಡದ ಒಟ್ಟು 42 ನಾಗರೀಕ ಪೊಲೀಸ್ ಕಾನ್ಸ್ ಟೆಬಲ್ ಪ್ರಶಿಕ್ಷಣಾರ್ಥಿಗಳಿಗೆ ನಿರ್ಗಮನ ಪಥಸಂಚಲನವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಕವಾಯತು ಮೈಧಾನದಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾದ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಒಳಾಂಗಣ ಹಾಗೂ ಹೊರಾಂಗಣ ವಿಷಯಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮತ್ತು […]