ಶಿರ್ವಾ: ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರಾವ್ (55) ಅವರು ಅನಾರೋಗ್ಯದಿಂದ ಮಾ.7ರಂದು ರಾತ್ರಿ ನಿಧನರಾದರು.
ಎರಡು ವಾರಗಳ ಹಿಂದೆ ಬೆಳಿಗ್ಗೆ ಶೌಚಾಲಯಕ್ಕೆ ಹೋಗುವಾಗ ಅವರು ಬಿದ್ದು ತಲೆಗೆ ಗಾಯಗೊಂಡಿದ್ದು, ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿತ್ತು. ತಲೆಯೊಳಗೆ ರಕ್ತಗಟ್ಟಿಕೆ (clots) ಕಂಡುಬಂದ ಹಿನ್ನೆಲೆಯಲ್ಲಿ ಕ್ರಾನಿಯೋಟಮಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
ಆದರೆ ಬಳಿಕವೂ ಅವರು ಅಚೇತನ ಸ್ಥಿತಿಯಲ್ಲೇ ಐಸಿಯುದಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ವೈದ್ಯರು ಸಿಪಿಆರ್ ನೀಡಿದರೂ ಪ್ರತಿಕ್ರಿಯೆ ಕಾಣಿಸದೆ ಅವರು ಕೊನೆಯುಸಿರೆಳೆದರು.
ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಅವರ ನಿಧನಕ್ಕೆ ವೈದ್ಯಕೀಯ ವಲಯ ಹಾಗೂ ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






