ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 03 ಕಳ್ಳತನ ಪ್ರಕರಣಗಳು ಮತ್ತು ವಿನೋಬನಗರ ಪೊಲೀಸ್ ಠಾಣೆಯ 01 ಕಳ್ಳತನ ಪ್ರಕರಣ ಸೇರಿ ಒಟ್ಟು 04 ಪ್ರಕರಣಗಳಲ್ಲಿ ಆರೋಪಿಯಾದ ಮೊಹಮ್ಮದ್ ಕರೀಂ, 26 ವರ್ಷ, ವಾಸ ಮೆಹದಿ ನಗರ ಶಿವಮೊಗ್ಗ ಈತನು ಕಳೆದ 05 ವರ್ಷಗಳಿಂದ ಘನ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಆರೋಪಿತನ ವಿರುದ್ಧ ಘನ 3ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗವು ದಸ್ತಗಿರಿ ವಾರೆಂಟ್ ಅನ್ನು ಜಾರಿ ಮಾಡಿರುತ್ತದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಕಾಂಡಿಕೆ ರವರ ನೇತೃತ್ವದ ಪ್ರೋಸೆಸ್ ಸಿಬ್ಬಂದಿಗಳಾದ ದಿವಾಕರ್ ಸಿ.ಹೆಚ್.ಸಿ- 311 ಮತ್ತು ವೀರೇಶ, ಸಿ.ಹೆಚ್.ಸಿ – 463 ರವರುಗಳ ತಂಡವು ಆರೋಪಿಯನ್ನು ದಸ್ತಗಿರಿ ಮಾಡಿ, ಘನ ನ್ಯಾಯಾಲಯದ ಮುಂದೆ ಹಾಜರ್ ಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







