ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಝಾನ್ಸಿ ಮೈದಾನದ ಬಳಿ ನಿಲ್ಲಿಸಿದ್ದ ಶ್ರೀ.ಮಂಜುನಾಥ ಬಿನ್ ಗೋಪಾಲಪ್ಪ, 50ವರ್ಷ, ವಕ್ಕಲಿಗರು, ಜಿರಾಯ್ತಿ, ಕೆಲಸ, ಗೋಪಸಂದ್ರ ಎಂಬುವರ ಬಾಬತ್ತು ನಂ ಕೆಎ 40 ಇಎ 4805 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ದಿನಾಂಕ 31/12/2025 ರಂದು ಸಂಜೆ 5-00 ಗಂಟೆಯಿಂದ 7-00 ಗಂಟೆಯ ಸಮಯದಲ್ಲಿ ಯಾರೋ ಕಳವುಮಾಡಿಕೊಂಡು ಹೋಗಿರುವುದಾಗಿ ಶ್ರೀ.ಮಂಜುನಾಥ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದ ಪತ್ತೆಯ ಕಾರ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಮಾನ್ಯ ಎಸ್.ಪಿ ಸಾಹೇಬರವರಾದ ರವರಾದ ಶ್ರೀ ಕುಶಲ್‌ಚೌಕೈ, ಐ.ಪಿ.ಎಸ್, ರವರು ಮತ್ತು ಮಾನ್ಯ ಎ.ಎಸ್.ಪಿ ಸಾಹೇಬರವರಾದ ಜಗನ್ನಾಥ್ ರೈ, ಕೆ.ಎಸ್.ಪಿ.ಎಸ್ ರವರು ಹಾಗು ಚಿಂತಾಮಣಿ ಉಪವಿಭಾಗದ ಡಿವೈ.ಎಸ್.ಪಿ ಸಾಹೇಬರವರಾದ ಶ್ರೀ ಮುರಳೀಧರ ರವರ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಶ್ರೀ ವೀಜಿಕುಮಾರ್ ರವರ ನೇತೃತ್ವದಲ್ಲಿ ತನಿಖೆಯನ್ನು ಕೈಗೊಂಡು ಪತ್ತೆ ಕಾರ್ಯಕ್ಕೆ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿದ್ದು, ಈ ತಂಡದವರು ಆರೋಪಿಗಳ ಬಗ್ಗೆ ಬಾತ್ಮಿ ಕಲೆಹಾಕಿ ದಿನಾಂಕ: 12/01/2026 ರಂದು ಮೇಲ್ಕಂಡ ಕಳುವು ಪ್ರಕರಣದಲ್ಲಿ ಕಳುವು ಮಾಡಿದ ಆರೋಪಿ ಎದೇವರಾಜ ಎನ್ ಬಿನ್ ಲೇಟ್ ನಾರಾಯಣಪ್ಪ, 27ವರ್ಷ. ಆದಿ ಕರ್ನಾಟಕ ಜನಾಂಗ, ಗಾರೆ ಕೆಲಸ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರನ್ನು ಪತ್ತೆ ಮಾಡಿ ಆರೋಪಿಯಿಂದ ಈ ಪ್ರಕರಣದಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನ ಹಾಗೂ ಆರೋಪಿಯು ಬೇರೆ ಕಡೆಗಳಲ್ಲಿ ಕಳವುಮಾಡಿದ್ದ ಒಟ್ಟು 4 ಲಕ್ಷ ರೂ ಬೆಲೆ ಬಾಳುವ 11 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು. ಆರೋಪಿಗಳನ್ನು ಮತ್ತು ಕಳುವಾದ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಾಚರಣೆಯು ಮಾನ್ಯ ಎಸ್.ಪಿ ಸಾಹೇಬರು ಮತ್ತು ಎ.ಎಸ್.ಪಿ ಸಾಹೇಬರು ಹಾಗು ಮಾನ್ಯ ಡಿವೈ.ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೀಜಿಕುಮಾರ್, ಪಿ.ಎಸ್.ಐ ಪ್ರಕಾಶ್, ಮತ್ತು ಸಿಬ್ಬಂದಿಯವರಾದ, ಹೆಚ್.ಸಿ 198 ಮಂಜುನಾಥ, ಹೆಚ್.ಸಿ 54 ವೆಂಕಟ್, ಹೆಚ್.ಸಿ 95 ವಿಶ್ವನಾಥ, ಹೆಚ್.ಸಿ 176 ಮುನಿರಾಜ.ಸಿ, ಪಿಸಿ 185 ಶ್ರೀನಿವಾಸಮೂರ್ತಿ, ಪಿಸಿ 551 ಲೋಕೇಶ್, ಪಿಸಿ 588 ಗಿರೀಶ್, ಪಿಸಿ 387 ಅನಿಲ್ ಕುಮಾರ್ ಪಿಸಿ 573 ಸುರೇಶ್, ರವರು ಪಾಲ್ಗೊಂಡಿರುತ್ತಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







