ಕೋಲಾರದ ಕೆಜಿಎಫ್ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಕಲಬೆರಕೆ ಹಾಲು ಮಾಡುತ್ತಿದ್ದ ಗ್ಯಾಂಗ್ ಪತ್ತೆಯಾಗಿದೆ. ಕೆಮಿಕಲ್ ಪೌಡರ್, ನಂದಿನಿ ಪೌಡರ್ ಬಳಸಿ ಆಂಧ್ರ ಮೂಲದ ವ್ಯಕ್ತಿಗಳು ಹಾಲು ತಯಾರು ಮಾಡ್ತಿದ್ದರು. ಹಾಲು ತಯಾರಿಕಾ ಮನೆಯ ಮೇಲೆ ಕೆಜಿಎಫ್ ನ ಆಂಡ್ರಸನ್‌ಪೇಟೆ ಪೊಲೀಸರು, ಆಹಾರ ಸುರಕ್ಷತಾ ಅಧಿಕಾರಿಗಳ ಸಮ್ಮುಖದಲ್ಲಿ ದಾಳಿ ನಡೆಸಿ ಕಲಬೆರಕೆ ಹಾಲು ತಯಾರು ಮಾಡ್ತಿದ್ದ 8 ಮಂದಿ ವಶಕ್ಕೆ ಪಡೆಯಲಾಗಿದೆ. ಆಂಧ್ರ ಮೂಲದ ವೆಂಕಟೇಶಪ್ಪ, ಬಾಲಾಜಿ, ದಿಲೀಪ್, ಬಾಲರಾಜು ಮತ್ತು ಮನೋಹರ್ ಎಂಬ ಆರೋಪಗಳನ್ನು ಬಂಧಿಸಲಾಗಿದೆ. ಕೆಮಿಕಲ್ ಮಿಶ್ರಿತ ಪುಡಿಗೆ ಪಾಮ್ ಆಯಿಲ್ ಬಳಸಿ ಹಾಲು ತಯಾರು ಮಾಡ್ತಿದ್ದರು, ಕಲಬೆರಕೆ ಹಾಲಿನ ದಂಧೆಗೆ ಸರ್ಕಾರಿ ಶಾಲೆಗೆ ಪೂರೈಕೆ ಮಾಡುವ ಅವಧಿ ಮೀರಿದ ಹಾಲು ಪುಡಿ ಬಳಕೆ ಮಾಡಿದ್ದಾರೆ. ಪೊಲೀಸರ ದಾಳಿ ವೇಳೆ ಕೆಮಿಕಲ್ ಮಿಶ್ರಿತ 56 ಹಾಲಿನ ಪೌಡರ್ ಚೀಲ, ಕಲಬೆರಕೆ ಹಾಲು ತುಂಬಿದ್ದ 51 ಕ್ಯಾನ್ ವಶಕ್ಕೆ ಪಡೆಯಲಾಗಿದ್ದು, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ






