ಮುರಗೋಡ: ಸಾರ್ವಜನಿಕ ಶಾಂತಿ ಮತ್ತು ರಸ್ತೆ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುರಗೋಡ ಪೊಲೀಸ್ ಠಾಣೆ ವತಿಯಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಟ್ರ್ಯಾಕ್ಟರ್‌ಗಳಲ್ಲಿ ಅನಧಿಕೃತವಾಗಿ ಹೆಚ್ಚಿನ ಶಬ್ಧ ಹೊರಹಾಕುವ ಸೌಂಡ್ ಸಿಸ್ಟಂಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅತಿಯಾದ ಶಬ್ಧದಿಂದ ಸಾರ್ವಜನಿಕರಿಗೆ, ವೃದ್ಧರಿಗೆ ಹಾಗೂ ರಸ್ತೆ ಸವಾರರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಪರಿಶೀಲನೆಯ ವೇಳೆ ನಿಯಮ ಉಲ್ಲಂಘಿಸಿ ಸೌಂಡ್ ಸಿಸ್ಟಂ ಬಳಕೆ ಮಾಡುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ತಡೆದು, ಅಳವಡಿಸಿದ್ದ ಸೌಂಡ್ ಉಪಕರಣಗಳನ್ನು ವಶಪಡಿಸಿಕೊಂಡರು.
ಶಬ್ಧ ಮಾಲಿನ್ಯ ನಿಯಂತ್ರಣ ಕಾನೂನುಗಳ ಅಡಿಯಲ್ಲಿ ಸಂಬಂಧಿತ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದೆಯೂ ಇಂತಹ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಸಾರ್ವಜನಿಕರು ಕಾನೂನು ಪಾಲನೆ ಮಾಡಬೇಕು ಹಾಗೂ ಶಾಂತಿ–ಸುವ್ಯವಸ್ಥೆಗೆ ಸಹಕರಿಸಬೇಕು ಎಂದು ಮುರಗೋಡ ಪೊಲೀಸರು ಮನವಿ ಮಾಡಿದ್ದಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







