ಕೆಲಸದಾಕೆಯ ಬಂಧನ.ಬಸವೇಶರನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ
ಎನ್.ಹೆಚ್.ಸಿ.ಎಸ್ ಲೇಔಟ್ ನಲ್ಲಿ ವಾಸವಿರುವ ಓರ್ವ ಮಹಿಳೆಯು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ತನ್ನ ಮನೆಯ ಬೀರುವಿನಲ್ಲಿದ್ದ ಚಿನ್ನದ ವಡವೆಗಳು, ಬೆಳ್ಳಿಯ ಪದಾರ್ಥಗಳನ್ನು ಯಾರೋ ಕಳುವು ಮಡಿಕೊಂಡು ಹೋಗಿರುತ್ತಾರೆ. ಪಿರಾದುದಾರರ ಮನೆಯಲ್ಲಿ ಕೆಲಸ ಮಾಡುವವಳ ಬಗ್ಗೆ ಅನುಮಾನವನ್ನು ಸಹ ವ್ಯಕ್ತಪಡಿಸಿರುತ್ತಾರೆ. ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕಳುವು. ಪ್ರಕರಣ ದಾಖಲಾಗಿರುತ್ತದೆ.
ತನಿಖೆ ಕೈಗೊಂಡ ಬಸವೇಶ್ವರನಗರ ಪೊಲೀಸರು, ಅದೇ ದಿನ ಅಂದರೆ 14-04-2024 ರಂದೇ ಬಸವೇಶ್ವರನಗರದಲ್ಲಿರುವ ಕಮಲಾನಗರದಿಂದ ಕೆಲಸದಾಕೆಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆಯಲ್ಲಿ ಕೆಲಸದಾಕೆಯು ತಾನು ಕಳುವು ಮಾಡಿರುವ ಬಗ್ಗೆ ತಪೋಪಿಕೊಂಡಿರುತ್ತಾಳೆ, ನಂತರ ಆಕೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿ, ಐದು ದಿನಗಳ ಕಾಲ ಪೊಲೀಸ್ ಅಭಿರಕೆಗೆ ಪಡೆಯಲಾಯಿತು.
ತನಿಖೆಯನ್ನು ಮುಂದುವರೆಸಿ, ಕೆಲಸದಾಕೆಯ ಮನೆಯಿಂದ ಒಟ್ಟು 66 ಗ್ರಾಂ ತೂಕದ ಚಿನ್ನದ ಆಭರಣಗಳು, 155 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಮೌಲ್ಯ 4,00,000/-( ನಾಲ್ಕು ಲಕ್ಷ ರೂಪಾಯಿ).
ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಗಿರೀಶ್ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ, ವಿಜಯನಗರ ಉಪ ವಿಭಾಗದ ಎಸಿಪಿ ಶೀಯುತ ಚಂದನ್ ಕುಮಾರ್, ಕೆ.ಎಸ್.ಪಿ.ಎಸ್. ರವರ ನೇತೃತ್ವದಲ್ಲಿ, ಬಸವೇಶ್ವರನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.