ಕಾರ್ಮಿಕ ಸಂಘಟನೆಗಳಿಂದ ಕರೆ ನೀಡಲಾಗಿದ್ದ ಭಾರತ್ ಬಂದ್ ಹಿನ್ನೆಲೆ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.
ಮುಖ್ಯ ರಸ್ತೆ ಜಂಕ್ಷನ್‌ಗಳು, ಬಸ್ ನಿಲ್ದಾಣಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಹಾಗೂ ವ್ಯಾಪಾರ ವಲಯಗಳ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಾಹನ ತಪಾಸಣೆ, ಪೆಟ್ರೋಲಿಂಗ್ ಮತ್ತು ನಿಗಾ ವಹಿಸಲಾಗಿತು.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ವತಃ ನಗರದಲ್ಲಿ ಸಂಚರಿಸಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಸಾರ್ವಜನಿಕರು ಶಾಂತಿ ಹಾಗೂ ಸಹಕಾರದಿಂದ ವರ್ತಿಸುವಂತೆ ಮನವಿ ಮಾಡಿದರು. ಒಟ್ಟಾರೆಯಾಗಿ ನಗರದಲ್ಲಿ ಶಾಂತಿಯುತ ವಾತಾವರಣ ಮುಂದುವರಿದಿದ್ದು, ಯಾವುದೇ ಅಪ್ರಿಯ ಘಟನೆಗಳು ವರದಿಯಾಗಿಲ್ಲವೆಂದು ಪೊಲೀಸ್ ಇಲಾಖೆ ತಿಳಿಸಿದೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







