ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಕೇಂದ್ರದ (NCORD) ಮಾಸಿಕ ಸಭೆಯನ್ನು ಶ್ರೀ. ಎನ್ ಎಂ ನಾಗರಾಜ, ಐಎಎಸ್, ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಇಂದು ನಡೆಸಲಾಯಿತು.
ಸಭೆಯಲ್ಲಿ ಶ್ರೀ. ಎನ್ ಎಂ ನಾಗರಾಜ, ಐಎಎಸ್, ಜಿಲ್ಲಾಧಿಕಾರಿಗಳು ಮತ್ತು ಶ್ರೀ. ಜಿತೇಂದ್ರ ಕುಮಾರ್ ದಾಯ್ಮಾ, ಐಪಿಎಸ್, ಪೊಲೀಸ್ ಅಧೀಕ್ಷಕರು ಸಭೆಯಲ್ಲಿ ಹಾಜರಿದ್ದ NCORD ಸಮಿತಿಯ ಸದಸ್ಯರೊಂದಿಗೆ ಮಾದಕ ವಸ್ತುಗಳ ನಿಯಂತ್ರಣದ ಕುರಿತು ಚರ್ಚಿಸಿ, ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಪೊಲೀಸ್, ಗುಪ್ತಚರ, ಅರಣ್ಯ, ಆರೋಗ್ಯ, ಶಿಕ್ಷಣ, ಅಬಕಾರಿ, ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ಕೈಗಾರಿಕೆ, ಐಟಿಡಿಪಿ, ಕಾರಾಗೃಹ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಪ್ರವಾಸೋದ್ಯಮ, ಕಾರ್ಮಿಕ ಮತ್ತು ಅಂಚೆ ಇಲಾಖೆಗಳ ಅಧಿಕಾರಿಗಳು, ವೈದ್ಯಕೀಯ ಕಾಲೇಜ್, ಸಂಸ್ಕೃತ ವಿಶ್ವವಿದ್ಯಾಲಯ, ಎಐಟಿ ಇಂಜಿನಿಯರಿಂಗ್ ಮತ್ತು ಐ.ಡಿ.ಎಸ್.ಜಿ. ಸರ್ಕಾರಿ ಪ್ರಥಮ ಕಾಲೇಜ್ ಪ್ರತಿನಿಧಿಗಳು ಹಾಗೂ ಮದ್ಯವಸನಿಗಳ ಸಮಗ್ರ ಪುನರ್ವವಸತಿ ಕೇಂದ್ರದ ಸಲಹೆಗಾರರು ಭಾಗವಹಿಸಿದ್ದರು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







