ದಿನಾಂಕ 30/01/2026 ರಂದು ಪೆರೇಸಂದ್ರ ಪೊಲೀಸ್ ಠಾಣೆಯ ಆವರಣದಲ್ಲಿ ಠಾಣಾ ವ್ಯಾಪ್ತಿಯ ರೌಡಿ ಅಸಾಮಿಗಳು ಮತ್ತು ಎಂ ಓ ಬಿ ಆಸಾಮಿಗಳ ಪೆರೇಡನ್ನು ಹಮ್ಮಿಕೊಂಡಿದ್ದು, ಎಲ್ಲಾ ಎಂ ಒ ಬಿ ಮತ್ತು ರೌಡಿ ಆಸಾಮಿಗಳಿಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗಲಾಟೆ ಗಲಭೆ ಮುಂತಾದವುಗಳಲ್ಲಿ ಭಾಗಿಯಾಗದಂತೆ ಸೂಕ್ತ ಎಚ್ಚರಿಕೆಗಳನ್ನು ನೀಡಲಾಗಿರುತ್ತದೆ. ಎಲ್ಲಾ ರೌಡಿ ಮತ್ತು ಎಂ ಓ ಬಿ ಆಸಾಮಿಗಳು ಸನ್ನಡತೆಯಿಂದ ಇದ್ದಲ್ಲಿ ಮೇಲಾಧಿಕಾರಿಗಳ ಸೂಚನೆಗಳಂತೆ ಅಂತಹವರ ರೌಡಿ ಹಾಳೆಯನ್ನು ಮತ್ತು ಎಂ.ಓ.ಬಿ ಹಾಳೆಯನ್ನು ಮುಕ್ತಾಯ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿರುತ್ತದೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







